ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ರಿಟನ್‌ ಸರ್ಕಾರದಿಂದ ಪರಿಸ್ಥಿತಿ ಅವಲೋಕನ’

Last Updated 15 ಫೆಬ್ರುವರಿ 2023, 5:23 IST
ಅಕ್ಷರ ಗಾತ್ರ

ಲಂಡನ್: ಭಾರತದಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ‘ಪರಿಶೀಲನೆ’ ನಡೆಸುತ್ತಿದ್ದು, ಬ್ರಿಟನ್‌ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಆದರೆ, ಈ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

‘ಸಂಸ್ಥೆಯ ದೆಹಲಿ ಹಾಗೂ ಮುಂಬೈ ಕಚೇರಿಗಳಲ್ಲಿನ ನಮ್ಮ ಸಿಬ್ಬಂದಿ ಪರಿಶೀಲನೆಗೆ ಸಹಕಾರ ನೀಡುತ್ತಿದ್ದಾರೆ’ ಎಂದು ಬಿಬಿಸಿ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಮ್ಮ ಸಿಬ್ಬಂದಿ ಬೆಂಬಲಕ್ಕೆ ನಿಂತಿದ್ದೇವೆ. ನಮ್ಮ ಪತ್ರಿಕಾಧರ್ಮವನ್ನು ಮುಂದುವರಿಸುವ ಜೊತೆಗೆ, ಭಾರತದಲ್ಲಿನ ನಮ್ಮ ವೀಕ್ಷಕರಿಗೆ ಸೇವೆ ಮುಂದುವರಿಸಲು ನಾವು ಬದ್ಧರಿದ್ದೇವೆ’ ಎಂದೂ ವಕ್ತಾರ ಹೇಳಿದ್ದಾರೆ.

ಗ್ಲೋಬಲ್ ಹಿಂದೂ ಫೆಡರೇಷನ್ ಎಂಬ ಸಂಘಟನೆಯು ಬಿಬಿಸಿ ಕಚೇರಿಗಳಲ್ಲಿನ ಪರಿಶೀಲನೆಯನ್ನು ಬೆಂಬಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT