ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಪಾಸ್‌ಪೋರ್ಟ್‌ನಲ್ಲಿ 70 ವರ್ಷದ ಬಳಿಕ ಬಂದ ‘ರಾಜ’

Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ಅಕ್ಷರ ಗಾತ್ರ

ಲಂಡನ್‌: ‘ಈ ಪಾಸ್‌ಪೋರ್ಟ್‌ ಹೊಂದಿದ ವ್ಯಕ್ತಿಗೆ ಯಾವುದೇ ಅಡಚಣೆಯಿಲ್ಲದೆ ಮುಕ್ತವಾಗಿ ಓಡಾಡಲು ಅವಕಾಶ ನೀಡುವಂತೆ, ಅಗತ್ಯ ಸಹಾಯ ಹಾಗೂ ರಕ್ಷಣೆ ನೀಡುವಂತೆ ಬ್ರಿಟಿಷ್‌ ಸಾಮ್ರಾಜ್ಯದ ರಾಜನ ಪರವಾಗಿ (ಹಿಸ್‌ ಮೆಜೆಸ್ಟಿ) ಸಾಮ್ರಾಜ್ಯ ಹಾಗೂ ಸರ್ಕಾರದ ಕಾರ್ಯದರ್ಶಿಯವರು ವಿನಂತಿಸುತ್ತಾರೆ’

–70 ವರ್ಷಗಳ ತರುವಾಯ ಬ್ರಿಟಿಷ್‌ ಪಾಸ್‌ಪೋರ್ಟ್‌ನಲ್ಲಿ ಇಂತಹ ಒಕ್ಕಣಿಕೆ ಮತ್ತೆ ಕಾಣಿಸಿಕೊಂಡಿದೆ.

ಬ್ರಿಟನ್‌ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರವರ್ಮನ್‌ ಅವರು ಮಂಗಳವಾರ ನೂತನ ವಿನ್ಯಾಸದ ಪಾಸ್‌ಪೋರ್ಟ್‌ ಬಿಡುಗಡೆ ಮಾಡಿದರು.

ರಾಣಿ ಎರಡನೇ ಎಲಿಜಬೆತ್‌ ಅವರು ಏಳು ದಶಕಗಳವರೆಗೆ ಬ್ರಿಟನ್‌ ಸಾಮ್ರಾಜ್ಞಿ ಆಗಿದ್ದರು. ಅಷ್ಟು ಕಾಲ ‘ರಾಣಿಯ ಪರವಾಗಿ (Her Majesty)’ ಎಂದೇ ಪಾಸ್‌ಪೋರ್ಟ್‌ ಒಕ್ಕಣಿಕೆ ಇರುತ್ತಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ರಾಣಿ ನಿಧನದ ನಂತರ, ಅವರ ಪುತ್ರ ಮೂರನೇ ಚಾರ್ಲ್ಸ್‌ ರಾಜನಾಗಿದ್ದಾರೆ. ಹೀಗಾಗಿ ಬ್ರಿಟನ್‌ ಆಡಳಿತ ಸಂಪ್ರದಾಯದಂತೆ ಪಾಸ್‌ಪೋರ್ಟ್‌ನಲ್ಲಿ ಈ ಬದಲಾವಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT