ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಎಲ್ಲರಿಗೂ ಅವಕಾಶಗಳನ್ನು ಸೃಷ್ಟಿಸುತ್ತಿದೆ: ಸುಜಿತ್‌ ಘೋಷ್‌

Published 25 ಜನವರಿ 2024, 12:50 IST
Last Updated 25 ಜನವರಿ 2024, 12:50 IST
ಅಕ್ಷರ ಗಾತ್ರ

ಲಂಡನ್‌: ‘ಭಾರತವು ತನ್ನ ಜನರ ಜತೆಗೆ ಜಗತ್ತಿನ ಇತರರಿಗೂ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಭಾರತದ ಈ ಪ್ರಗತಿಯ ಲಾಭವನ್ನು ಪಡೆಯುವಲ್ಲಿ ಯುಕೆ ಅನನ್ಯ ಸ್ಥಾನದಲ್ಲಿದೆ’ ಎಂದು ಬ್ರಿಟನ್‌ನಲ್ಲಿರುವ ಭಾರತ ಹೈ ಕಮಿಷನರ್‌ ಸುಜಿತ್‌ ಘೋಷ್‌ ಬುಧವಾರ ಹೇಳಿದ್ದಾರೆ.

ಇಂಡಿಯಾ ಗ್ಲೋಬಲ್‌ ಫೋರಂ (ಐಜಿಎಫ್‌) ಆಯೋಜಿಸಿದ್ದ ಯುಕೆ– ಭಾರತ ಸಂಸದೀಯ ಸದಸ್ಯರ ಭೋಜನ ಕೂಟದಲ್ಲಿ ಅವರು ಮಾತನಾಡಿದರು.

ಈ ವಾರ್ಷಿಕ ಕಾರ್ಯಕ್ರಮವು ಎರಡು ಪ್ರಮುಖ ಪ್ರಜಾಪ್ರಭುತ್ವ ದೇಶಗಳ ರಾಜಕೀಯ, ವ್ಯಾವಹಾರಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ವ್ಯಕ್ತಿಗಳನ್ನು ಒಂದೇ ವೇದಿಕೆಯಡಿ ತಂದು ಸಂವಾದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಐಜಿಎಫ್‌ ವೆಬ್‌ಸೈಟ್‌ ಹೇಳಿದೆ.

ಎರಡೂ ದೇಶಗಳ ನಡುವಿನ ಸಂಬಂಧ, ಡಿಜಿಟಲ್‌ ಆರ್ಥಿಕತೆ ಮತ್ತು ಭಾರತದಲ್ಲಿನ ಅವಕಾಶಗಳ ಕುರಿತು ಘೋಷ್‌ ಮಾತನಾಡಿದರು ಎಂದು ಐಜಿಎಫ್‌ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ. 

‘ಬ್ರಿಟನ್‌ನಲ್ಲಿರುವ ಸ್ನೇಹಿತರು ತಮ್ಮ ಹಳೆಯ ಧೋರಣೆಯನ್ನು ಬಿಟ್ಟು, ಭಾರತ ಏನೆಂಬುದನ್ನು ಹೊಸ ದೃಷ್ಟಿಯಿಂದ ನೋಡುವ ಸಮಯ ಬಂದಿದೆ’ ಎಂದು ಘೋಷ್‌ ಹೇಳಿದ್ದಾರೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT