ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಮಿಕ್‌ ಉಗ್ರವಾದದಿಂದ ಬ್ರಿಟನ್‌ಗೆ ಬೆದರಿಕೆ: ವರದಿ

Published 18 ಜುಲೈ 2023, 15:48 IST
Last Updated 18 ಜುಲೈ 2023, 15:48 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ಗೆ ಆಂತರಿಕವಾಗಿ ಭಯೋತ್ಪಾದಕ ಬೆದರಿಕೆ ಇರುವುದು ಇಸ್ಲಾಮಿಕ್‌ ಉಗ್ರವಾದದಿಂದ ಎಂದು ಬ್ರಿಟಿಷ್‌ ಸರ್ಕಾರವು ಸಂಸತ್ತಿಗೆ ನೀಡಿರುವ ಹೊಸ ವರದಿಯೊಂದರಲ್ಲಿ ಹೇಳಿದೆ.

ಅಲ್‌ ಖೈದಾ ಮತ್ತು ಇಸ್ಲಾಮಿಕ್‌ ಸ್ಟೇಟ್‌ನಂಥ ಭಯೋತ್ಪಾದಕ ಸಂಘಟನೆಗಳು ಆನ್‌ಲೈನ್‌ ಮೂಲಕ ಉಗ್ರವಾದವನ್ನು ಹೆಚ್ಚು ಪ್ರಚುರಪಡಿಸಲು ದಾರಿ ಕಂಡುಕೊಳ್ಳುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

‘ಕಾಂಟೆಸ್ಟ್‌: 2023ರಲ್ಲಿ ಉಗ್ರವಾದಕ್ಕೆ ಸವಾಲೊಡ್ಡಲು ಬ್ರಿಟನ್‌ನ ತಂತ್ರ’ ಎಂಬ ಶೀರ್ಷಿಕೆ ಅಡಿ ವರದಿ ತಯಾರಿಸಲಾಗಿದೆ. ಇದರಲ್ಲಿಯ ಮುಖ್ಯ ಅಂಶಗಳನ್ನು ಅಲ್ಲಿಯ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್‌ಮನ್‌ ಅವರು ಬ್ರಿಟನ್ ಸಂಸತ್‌ ಎದುರು ಪ್ರಸ್ತುತಪಡಿಸಿದರು. ಇಸ್ಲಾಮಿಕ್‌ ಸಂಘಟನೆಗಳಿಂದ ದೇಶಕ್ಕೆ ಸತತವಾಗಿ ಎದುರಾಗುತ್ತಿರುವ ಬೆದರಿಕೆಗಳು ಮತ್ತು ಈಗ ಎದುರಾಗುತ್ತಿರುವ ಹೊಸ ಬೆದರಿಕೆಗಳ ಬಗ್ಗೆ ಅವರು ಮಾಹಿತಿ ನೀಡಿದರು.

‘ಹೆಚ್ಚುತ್ತಿರುವ ಭಯೋತ್ಪಾದನೆಯ ಅಪಾಯವನ್ನು ನಾವು ಮನಗಂಡಿದ್ದೇವೆ. ಅದನ್ನು ಮಟ್ಟಹಾಕುಲು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಾದ ಎಲ್ಲವನ್ನೂ ಮಾಡಬೇಕು’ ಎಂದು ಭಾರತ ಮೂಲದ ಬ್ರೇವರ್‌ಮನ್ ಅವರು ಸಂಸತ್ತಿಗೆ ಲಿಖಿತ ಹೇಳಿಕೆ ನೀಡಿಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT