ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶಕ್ಕೆ ಬಂದಿಳಿದ ವಿಶ್ವಸಂಸ್ಥೆಯ ತಜ್ಞರ ತಂಡ

Published : 22 ಆಗಸ್ಟ್ 2024, 13:37 IST
Last Updated : 22 ಆಗಸ್ಟ್ 2024, 13:37 IST
ಫಾಲೋ ಮಾಡಿ
Comments

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಮೀಸಲಾತಿ ವಿರೋಧಿ ಪ್ರತಿಭಟನೆಯಲ್ಲಿ 650 ಮಂದಿ ಮೃತಪಟ್ಟ ಪ್ರಕರಣದ ಕುರಿತು ತನಿಖೆಯ ರೂಪುರೇಷೆ ಸಿದ್ಧಪಡಿಸಲು ತಜ್ಞರನ್ನು ಒಳಗೊಂಡ ತಂಡವು ಗುರುವಾರ ರಾಜಧಾನಿ ಢಾಕಾಗೆ ಬಂದಿಳಿಯಿತು.

‘ದೌರ್ಜನ್ಯ ಕುರಿತು ತನಿಖೆ ನಡೆಸಲು ಪ್ರಾಥಮಿಕ ಹಂತವಾಗಿ ಈ ತಂಡವು ಬಂದಿಳಿದಿದೆ. ವಿಶ್ವಸಂಸ್ಥೆಯ ಸತ್ಯಶೋಧನಾ ತಂಡ ಬರುವ ಮುನ್ನ ತನಿಖೆಯ ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶದೊಂದಿಗೆ ಒಪ್ಪಂದವನ್ನು ಎದುರು ನೋಡುತ್ತಿದ್ದೇವೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ‘ದಿ ಡೈಲಿ ಸ್ಟಾರ್‌’ ಸುದ್ದಿಪತ್ರಿಕೆ ವರದಿ ಮಾಡಿದೆ.

‘ಜುಲೈ 1ರಿಂದ ಆಗಸ್ಟ್‌ 15ರ ತನಕ ನಡೆದ ಎಲ್ಲ ಮಾದರಿಯ ಮಾನವ ಹಕ್ಕುಗಳ ಉಲ್ಲಂಘನೆಯ ಬಗೆಗೆ ಹಾಗೂ ತನಿಖೆಗೆ ಪೂರಕವಾದ ನಿಯಮ–ಷರತ್ತುಗಳ ಕುರಿತಂತೆಯೂ ಮಧ್ಯಂತರ ಸರ್ಕಾರದ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ.

ಒಂದು ವಾರ ತಂಡವು ಢಾಕಾದಲ್ಲಿಯೇ ಉಳಿಯಲಿದ್ದು, ನಾಗರಿಕ ಸಮಾಜದ ಗುಂಪುಗಳು, ಮಾನವ ಹಕ್ಕು ಉಲ್ಲಂಘನೆಯಿಂದ ನೊಂದ ವ್ಯಕ್ತಿಗಳು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ’ ಎಂದು ಅವರು ತಿಳಿಸಿದ್ದಾರೆ.

ತಂಡವು ಬಂದಿರುವುದನ್ನು ಬಾಂಗ್ಲಾದೇಶ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT