ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿಯಾಗಿ ಕೆಲಸ ಮಾಡದವರಿಗೆ ಚೀನಾದ ಕಂಪನಿಯೊಂದು ನೀಡುವ ಶಿಕ್ಷೆ ಏನು ಗೊತ್ತೇ?

Last Updated 8 ನವೆಂಬರ್ 2018, 14:00 IST
ಅಕ್ಷರ ಗಾತ್ರ

ಬೀಜಿಂಗ್:ಸರಿಯಾಗಿ ಕೆಲಸ ಮಾಡದ ಕಾರ್ಮಿಕರಿಗೆ ಚೀನಾದ ಮನೆ ನವೀಕರಣ ಕಂಪನಿಯೊಂದು ನೀಡುವ ಶಿಕ್ಷೆ ಏನು ಗೊತ್ತೇ?ಶೌಚಾಲಯದ ಕಮೋಡ್‌ನಿಂದ ಮೂತ್ರ ಕುಡಿಸುವುದು! ಜಿರಲೆಯಂತಹ ಕೀಟಗಳನ್ನು ತಿನ್ನುವಂತೆ ಬಲವಂತ ಮಾಡುವುದು, ಬೆಲ್ಟ್‌ನಿಂದ ಹೊಡೆಯುವುದು ಮತ್ತು ಒಂದು ತಿಂಗಳ ವೇತನ ತಡೆಹಿಡಿಯುವುದು.

ಹೌದು, ಚೀನಾದ ಗುಯಿಝೌ ಪ್ರಾಂತದ ಕಂಪನಿಯೊಂದು ಕಾರ್ಮಿಕರಿಗೆ ಈ ರೀತಿಯ ಶಿಕ್ಷೆ ನೀಡುತ್ತಿದೆಯಂತೆ. ಈ ಬಗ್ಗೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು, ವಿಡಿಯೊಗಳು ಮತ್ತು ಕಂಪನಿ ತ್ಯಜಿಸಿದ ಕಾರ್ಮಿಕರ ಹೇಳಿಕೆ ಉಲ್ಲೇಖಿಸಿ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಕರ್ತವ್ಯದ ಸಮಯದಲ್ಲಿ ಚರ್ಮದ ಬೂಟನ್ನು ಧರಿಸದ ಕಾರ್ಮಿಕರಿಗೆ 50 ಯುವಾನ್‌ಗಳ ದಂಡವನ್ನು ವಿಧಿಸಲಾಗುತ್ತಿದೆಯಂತೆ. ಇಂತಹ ಶಿಕ್ಷೆಗಳನ್ನು ನೀಡಲು ಈ ವರ್ಷ ಆರಂಭಿಸಲಾಗಿದ್ದು, ಇಷ್ಟೆಲ್ಲ ಶಿಕ್ಷೆಗಳ ಹೊರತಾಗಿಯೂ ಅನೇಕ ಕಾರ್ಮಿಕರು ಆ ಕಂಪನಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಮಾಧ್ಯಮ ವರದಿ ಮಾಡಿದೆ.

ಇತರರನ್ನು ಅವಮಾನಿಸಿದ ಆರೋಪದಲ್ಲಿ ಆ ಕಂಪನಿಯ ಮೂವರು ಮ್ಯಾನೇಜರ್‌ಗಳಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬ ಸ್ಥಳೀಯ ಸಾರ್ವಜನಿಕ ಭದ್ರತಾ ಬ್ಯುರೋದ ಸಂದೇಶವನ್ನೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT