ವಾಷಿಂಗ್ಟನ್: ಜೋರ್ಡಾನ್‌ನಲ್ಲಿ ಇರಾನ್ ಬೆಂಬಲಿತ ಬಂಡುಕೋರರು ಡ್ರೋನ್ ದಾಳಿ ನಡೆಸಿ ತನ್ನ ಮೂವರು ಯೋಧರನ್ನು ಕೊಂದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ, ನಾವು ಮತ್ತೊಂದು ಯುದ್ಧವನ್ನು ಬಯಸುವುದಿಲ್ಲ ಅಥವಾ ಉದ್ವಿಗ್ನತೆಯನ್ನು ಹೆಚ್ಚಿಸಲು ಇಚ್ಛಿಸುವುದಿಲ್ಲ. ಆದರೆ, ಆ ಪ್ರದೇಶದ ರಕ್ಷಣೆಗೆ ಬೇಕಾದ ಎಲ್ಲ ಕ್ರಮ ಜರುಗಿಸುತ್ತೇವೆ ಎಂದಿದೆ.

ದಾಳಿಯಲ್ಲಿ ಅಮೆರಿಕದ 30ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಪರಿಷತ್‌ನ ಕಾರ್ಯತಂತ್ರ ಸಂವಹನದ ಸಮನ್ವಯಕಾರ ಜಾನ್ ಕಿರ್ಬಿ ಪತ್ರಕರ್ತರಿಗೆ ತಿಳಿಸಿದ್ದಾರೆ.

‘ನಮ್ಮ ಪಡೆಗಳು ಈ ಪ್ರದೇಶದಲ್ಲಿ ಐಸಿಸ್ ಅನ್ನು ಎದುರಿಸಲು ಮಿತ್ರ ರಾಷ್ಟ್ರದೊಂದಿಗೆ ಕೆಲಸ ಮಾಡುವ ಗುರಿಯನ್ನು ಅಮೆರಿಕ ಹೊಂದಿವೆ. ರಕ್ಷಣಾ ಇಲಾಖೆಯು ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದ್ದು, ಕಾರ್ಯಾಚರಣೆಯು ಮುಂದುವರಿಯಬೇಕು ಮತ್ತು ಮುಂದುವರಿಯುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಐಸಿಸ್ ಮಿಷನ್ ಪ್ರತ್ಯೇಕ ಮತ್ತು ವಿಭಿನ್ನವಾದದ್ದಾಗಿದೆ. ನಿಜಕ್ಕೂ ಇದು ಇಸ್ರೇಲ್ ಅನ್ನು ಬೆಂಬಲಿಸಲು ಅಲ್ಲ. ಈ ಪ್ರದೇಶದಲ್ಲಿ ವ್ಯಾಪಕ ಸಂಘರ್ಷವನ್ನು ತಡೆಗಟ್ಟಲು ದೀರ್ಘಕಾಲದಿಂದ ನಡೆಯುತ್ತಿರುವ ಪ್ರಯತ್ನವಾಗಿದೆ’ ಎಂದು ಕಿರ್ಬಿ ಹೇಳಿದ್ಧಾರೆ.

‘ನಾವು ಮತ್ತೊಂದು ಯುದ್ಧವನ್ನು ಬಯಸುವುದಿಲ್ಲ. ಉದ್ವಿಗ್ನತೆ ಹೆಚ್ಚಿಸಲು ಪ್ರಯತ್ನಿಸುವುದಿಲ್ಲ. ಆದರೆ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು, ಆ ಕಾರ್ಯಾಚರಣೆಯನ್ನು ಮುಂದುವರಿಸಲು ಮತ್ತು ಈ ದಾಳಿಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಅಗತ್ಯವಿರುವುದನ್ನು ಮಾಡುತ್ತೇವೆ’ ಎಂದು ಅವರು ಪ್ರತಿಪಾದಿಸಿದರು.

ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ರಾಷ್ಟ್ರೀಯ ಭದ್ರತಾ ತಂಡವನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ. ವಿವಿಧ ಆಯ್ಕೆಗಳನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.