ಅಮೆರಿಕ ಮತ್ತು ತಾಲಿಬಾನ್ ಫೆ. 29ರಂದು ಶಾಂತಿ ಒಪ್ಪದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದಿಂದ 18 ವರ್ಷಗಳ ಹಿಂದೆ ಆಫ್ಗನ್ನಲ್ಲಿ ನಡೆಯುತ್ತಿರುವ ಯುದ್ಧ ಕೊನೆಗಾಣುವಂತಾಗಿದೆ.ಆಫ್ಗನ್ನಲ್ಲಿ ಅಮೆರಿಕ ಪ್ರಸ್ತುತ 13 ಸಾವಿರ ಸೈನಿಕರನ್ನು ಹೊಂದಿದ್ದು, ಶಾಂತಿ ಒಪ್ಪಂದದ ಪ್ರಕಾರ, ಅಮೆರಿಕ ಜುಲೈ ತಿಂಗಳ ಹೊತ್ತಿಗೆ ಸುಮಾರು 8,600 ಸೈನಿಕರನ್ನು ಕಡಿತಗೊಳಿಸಲಿದೆ. ಒಟ್ಟು 20 ಸೇನಾ ನೆಲೆಗಳ ಪೈಕಿ 5 ನೆಲೆಗಳನ್ನು ಮುಚ್ಚಲಿದೆ.