ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಮತ್ತೋರ್ವ ಮಹಿಳೆ

Last Updated 22 ಜೂನ್ 2019, 5:13 IST
ಅಕ್ಷರ ಗಾತ್ರ

ವಾಷಿಂಗ್‌ಟನ್: ಫ್ಯಾಷನ್ ಲೋಕದ ಜನಪ್ರಿಯ ನಿಯತಕಾಲಿಕೆ ‘ಎಲ್ಲೆ’ಗೆ ಅಂಕಣ ಬರೆಯುವಇ.ಜೀನ್ ಕರೋಲ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಟ್ರಂಪ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

‘ಇದು 1995 ಅಥವಾ 1996ರಲ್ಲಿ ನಡೆದ ಘಟನೆ. ಆಗ ಟ್ರಂಪ್ ಅಮೆರಿಕದ ಪ್ರಖ್ಯಾತ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದರು. ನಾನು ಟೆಲಿವಿಷನ್ ಷೋಗಳ ನಿರೂಪಕಿಯಾಗಿ ಮತ್ತು ನಿಯತಕಾಲಿಕೆಗಳ ಲೇಖಕಿಯಾಗಿ ಜನಪ್ರಿಯಳಾಗಿದ್ದೆ’ ಎಂದು ಕರೋಲ್ ನೆನಪಿಸಿಕೊಂಡಿದ್ದಾರೆ.

ನ್ಯೂಯಾರ್ಕ್ ಮ್ಯಾಗಜೀನ್ ಪ್ರಕಟಿಸಿರುವ ಕರೋಲ್ ಅವರ ಹೊಸ ಪುಸ್ತಕದಲ್ಲಿ ಟ್ರಂಪ್ ಲೈಂಗಿಕ ದೌರ್ಜನ್ಯ ಎಸಗಿದ ವಿವರ ನಮೂದಾಗಿದೆ. ಇದು ಟ್ರಂಪ್ ಅವರ ವಿರುದ್ಧ ಕೇಳಿ ಬಂದಿರುವ 16ನೇ ಲೈಂಗಿಕ ದೌರ್ಜನ್ಯ ಆರೋಪವಾಗಿದೆ. ಇದೀಗ 75ರ ಹರೆಯದಲ್ಲಿರುವ ಕರೋಲ್ ತಮ್ಮ ಪುಸ್ತಕದಲ್ಲಿ ನಮೂದಿಸಿರುವ ವಿವರಗಳು ಇಂತಿವೆ....

‘ಮ್ಯಾನ್‌ಹಟನ್‌ನ ಬರ್ಗ್‌ಡೊರ್ಫ್ ಗುಡ್‌ಮನ್ ಡಿಪಾರ್ಟ್‌ಮೆಂಟ್‌ ಸ್ಟೋರ್‌ನಲ್ಲಿ ನಾನು ಟ್ರಂಪ್ ಅವರನ್ನು ಭೇಟಿಯಾಗಿದ್ದೆ. ನೋಡಿದ ತಕ್ಷಣ ಮುಗುಳ್ನಗೆಯೊಂದಿಗೆ ಸಂಭಾಷಣೆ ಆರಂಭವಾಯಿತು. ಮಹಿಳೆಯೊಬ್ಬರಿಗೆ ಒಳ ಉಡುಪು ಖರೀದಿಸಲು ಟ್ರಂಪ್ ನನ್ನ ಸಲಹೆ ಕೋರಿದರು.

‘ಡ್ರೆಸಿಂಗ್ ರೂಂ ಬಾಗಿಲು ಹಾಕಿದ ತಕ್ಷಣ ಟ್ರಂಪ್ ನನ್ನನ್ನು ಬಿಗಿಯಾಗಿ ಹಿಡಿದುಕೊಂಡು ಗೋಡೆಗೆ ಒತ್ತಿದರು. ನನ್ನ ತಲೆಗೆ ಹೊಡೆದು, ತುಟಿಯ ಮೇಲೆ ಬಾಯಿಟ್ಟರು. ನನ್ನ ಬಟ್ಟೆ ಬಿಚ್ಚಲು ಯತ್ನಿಸುತ್ತಿದ್ದಾಗ, ನಾನು ತಪ್ಪಿಸಿಕೊಂಡು ಓಡಿಬಂದೆ. ಈ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಕೊಡಲು ಭಯವಾಗಿತ್ತು. ಒಂದು ವೇಳೆ ದೂರು ಕೊಟ್ಟರೆನನ್ನನ್ನು ಕೊಲ್ಲಬಹುದು, ಕೆಲಸ ಕಳೆದುಕೊಳ್ಳಬಹುದು ಎಂದು ಹೆದರಿಬಿಟ್ಟಿದ್ದೆ.

‘ಟ್ರಂಪ್ ವಿರುದ್ಧ ಈವರೆಗೆ 15 ಮಹಿಳೆಯರು ಲೈಂಗಿದ ದೌರ್ಜನ್ಯದ ಆರೋಪ ಮಾಡಿದ್ದಾರೆ. ಆದರೆ ಟ್ರಂಪ್ ಇಂಥ ಆರೋಪಗಳನ್ನು ನಿರಾಕರಿಸಿ, ಬಾಣವನ್ನು ಅವರ ವಿರುದ್ಧವೇ ತಿರುಗಿಸಿದ್ದಾರೆ. ಇದನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಕೆರೋಲ್ ಹೇಳಿದ್ದಾರೆ.

ಕೆರೋಲ್ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ‘ಆಕೆ ಕೇವಲ ಗಮನ ಸೆಳೆಯಲು ಯತ್ನಿಸುತ್ತಿರುವ ಮಹಿಳೆ. ಆಕೆಯನ್ನು ನಾನು ಜೀವನದಲ್ಲಿ ಎಂದೂ ಭೇಟಿಯಾಗಿಲ್ಲ. ಆಕೆ ತನ್ನ ಹೊಸ ಪುಸ್ತಕ ಮಾರಲು ಯತ್ನಿಸುತ್ತಿದ್ದಾರೆ. ಆ ಪುಸ್ತಕವನ್ನು ಫಿಕ್ಷನ್ (ಸೃಜನಶೀಲ) ವಿಭಾಗದಲ್ಲಿ ಮಾರಬೇಕು’ ಎಂದು ಲೇವಡಿ ಮಾಡಿದ್ದಾರೆ.

‘ನ್ಯೂಯಾರ್ಕ್ ಮ್ಯಾಗಜೀನ್ ಒಂದು ಸಾಯುತ್ತಿರುವ ಪ್ರಕಟಣೆ. ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮೂಲಕ ಜೀವ ಉಳಿಸಿಕೊಳ್ಳಲು ಯತ್ನಿಸುತ್ತಿದೆ’ ಎಂದು ಟ್ರಂಪ್ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT