ವಾಷಿಂಗ್ಟನ್: ಸರ್ಕಾರವನ್ನು ಟೀಕಿಸುವವರು, ಪತ್ರಕರ್ತರು ಹಾಗೂ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುವ ಸಲುವಾಗಿ ಗೂಢಚರ್ಯೆ ತಂತ್ರಜ್ಞಾನ ಬಳಸುವುದನ್ನು ತಾನು ವಿರೋಧಿಸುವುದಾಗಿ ಅಮೆರಿಕ ಹೇಳಿದೆ.

ಪೆಗಾಸಸ್ ತಂತ್ರಾಂಶವನ್ನು ಗೂಢಚರ್ಯೆಗಾಗಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಡೀನ್ ಥಾಂಪ್ಸನ್, ‘ನ್ಯಾಯಾಲಯಗಳ ಆದೇಶವಿಲ್ಲದೇ, ಈ ರೀತಿ ಗೂಢಚರ್ಯೆ ನಡೆಸುವುದು ಕಳವಳಕಾರಿ’ ಎಂದಿದ್ದಾರೆ.‘

‘ಭಾರತದಲ್ಲಿ ಪೆಗಾಸಸ್ ತಂತ್ರಾಂಶವನ್ನು ದುರ್ಬಳಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ತಮಗೆ ನಿರ್ದಿಷ್ಟ ಮಾಹಿತಿ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

‘ಇದು ಸಣ್ಣ ವಿಷಯವಲ್ಲ. ಕಂಪನಿಗಳು ತಾವು ಅಭಿವೃದ್ಧಿಪಡಿಸುವ ತಂತ್ರಾಂಶವನ್ನು ಗೂಢಚರ್ಯೆಗೆ ಬಳಸದಂತೆ ತಡೆಯುವುದನ್ನು ಖಾತರಿಪಡಿಸಬೇಕು. ಈ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕು’ ಎಂದೂ ಥಾಂಪ್ಸನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.