ನ್ಯೂಯಾರ್ಕ್: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಮಹಿಳಾ ಪೊಲೀಸ್ ಅಧಿಕಾರಿ ಛಾಯಾ ಶರ್ಮಾ ಅವರು, ನ್ಯೂಯಾರ್ಕ್‌ನ ‘ಏಷ್ಯಾ ಸೊಸೈಟಿ’ ನೀಡುವ 2019ರ ಸಾಲಿನ ಏಷ್ಯಾ ಸೊಸೈಟಿ ಗೇಮ್ ಚೇಂಜರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾರತ ಹಾಗೂ ನೇಪಾಳದ ಬೌದ್ಧ ಸನ್ಯಾಸಿನಿಯರ ಗುಂಪು ‘ಕುಂಗ್ ಫು ನನ್ಸ್’ ಸಹ ಪ್ರಶಸ್ತಿಗೆ ಆಯ್ಕೆಯಾಗಿರುವವರ ಪಟ್ಟಿಯಲ್ಲಿ ಇದೆ. ಈ ಬೌದ್ಧ ಸನ್ಯಾಸಿನಿಯರು ಸಮರ ಕಲೆಗಳಲ್ಲಿ ಪರಿಣತಿ ಸಾಧಿಸಿದ್ದು, ಸಾಮಾಜಿಕ ಚಟುವಟಿಕೆ ಹಾಗೂ ಮಾನವೀಯ ಕಾರ್ಯಗಳಲ್ಲಿ ತೊಡಗಿದ್ದಾರೆ.

‘ಏಷ್ಯಾಕ್ಕೆ ಕೊಡುಗೆ ನೀಡುವಲ್ಲಿ ಪಾತ್ರವಹಿಸುತ್ತಿರುವ ನೈಜ ನಾಯಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. 2014ರಲ್ಲಿ ಪ್ರಶಸ್ತಿ ಆರಂಭವಾದ ನಂತರ, ಇದೇ ಮೊದಲ ಬಾರಿಗೆ ಪ್ರಶಸ್ತಿಗೆ ಭಾಜನ ರಾಗುತ್ತಿರುವ ಎಲ್ಲರೂ ಮಹಿಳೆಯರಾಗಿದ್ದಾರೆ. ಛಾಯಾ ಶರ್ಮಾ ಅವರು ಭಾರತ ದಲ್ಲಿನ ಮಹಿಳಾ ಪೊಲೀಸ್ ಅಧಿಕಾರಿಗಳ ವೃತ್ತಿನಿರ್ವಹಣೆಯ ವ್ಯಾಖ್ಯಾನವನ್ನೇ ಬದಲಿಸಿದ್ದಾರೆ. ನಿರ್ಭಯಾ ಪ್ರಕರಣಕ್ಕೂ ಮೊದಲು ಸಹ ಅವರು ದೆಹಲಿಯ ಕೆಲವು ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ’ ಎಂದು ಸೊಸೈಟಿ ತಿಳಿಸಿದೆ.

ಪ್ರಸ್ತುತ ಛಾಯಾ ಶರ್ಮಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಧಾನ ಪೊಲೀಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ತಿಂಗಳು ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.