ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ H9N2 ದೃಢ: WHO

Published 12 ಜೂನ್ 2024, 4:24 IST
Last Updated 12 ಜೂನ್ 2024, 4:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಮಗುವಿನಲ್ಲಿ ಮಾನವನಲ್ಲಿ ಕಾಣಸಿಕೊಳ್ಳುವ ಹಕ್ಕಿ ಜ್ವರ H9N2 ಸೋಂಕು ಇರುವುದು ದೃಢಪಟ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ನಿರಂತರ ಉಸಿರಾಟದ ಸಮಸ್ಯೆ, ತೀವ್ರ ಜ್ವರ ಮತ್ತು ಕಿಬ್ಬೊಟ್ಟೆಯ ಸೆಳೆತದಿಂದಾಗಿ ಫೆಬ್ರುವರಿಯಲ್ಲಿ ಮಗುವನ್ನು ಸ್ಥಳೀಯ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಮೂರು ತಿಂಗಳ ಬಳಿಕ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.

ಮಗುವಿನ ಕುಟುಂಬದ ಇತರ ಸದಸ್ಯರಲ್ಲಿ ಉಸಿರಾಟದ ಸಮಸ್ಯೆ ಇರಲಿಲ್ಲ. ಮಗು ಮನೆಯ ಸುತ್ತಮುತ್ತಲಿರುವ ಸಾಕು ಕೋಳಿಗಳೊಂದಿಗೆ ಹೆಚ್ಚು ಒಡನಾಟ ನಡೆಸಿದ ಕಾರಣ ಕಾಯಿಲೆ ಉಲ್ಬಣಗೊಂಡಿದೆ ಎಂದು ಆರೋಗ್ಯ ಸಂಸ್ಥೆ  ತಿಳಿಸಿದೆ.

ಇದು ಭಾರತದಲ್ಲಿ ಪತ್ತೆಯಾದ ಎರಡನೇ H9N2 ಹಕ್ಕಿ ಜ್ವರದ ಪ್ರಕರಣವಾಗಿದ್ದು, 2019ರಲ್ಲಿ ಮೊದಲ ಪ್ರಕರಣ ವರದಿಯಾಗಿದೆ ಎಂದೂ ಸಂಸ್ಥೆ ಹೇಳಿರುವುದಾಗಿ ರಾಯಿಟರ್ಸ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT