ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಿ ಪಡೆಯ ಕ್ಷಿಪಣಿ ಹೊಡೆದುರುಳಿಸಿದ ಅಮೆರಿಕ

Published 27 ಜನವರಿ 2024, 15:48 IST
Last Updated 27 ಜನವರಿ 2024, 15:48 IST
ಅಕ್ಷರ ಗಾತ್ರ

ಜೆರುಸಲೇಂ: ಯೆಮೆನ್‌ನ ಹುತಿ ಬಂಡುಕೋರರ ನೌಕೆ ಧ್ವಂಸಕ ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ತಿಳಿಸಿದೆ.

ಅಡೆನ್‌ ಖಾರಿಯಲ್ಲಿ ಗಸ್ತು ಕಾರ್ಯದಲ್ಲಿದ್ದ ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡು ಬಂಡುಕೋರರು ಶುಕ್ರವಾರ ಕ್ಷಿಪಣಿ ದಾಳಿ ನಡೆಸಿದ್ದರು. ಅದೇ ದಿನ ರಾತ್ರಿ ಕೆಂಪು ಸಮುದ್ರದಲ್ಲಿ ಬ್ರಿಟನ್‌ನ ತೈಲ ಸಾಗಣೆ ಹಡಗಿನ ಮೇಲೆ ದಾಳಿ ನಡೆಸಿದ್ದರು. ಹಡಗು ಹೊತ್ತಿ ಉರಿದಿತ್ತು. ಈ ದಾಳಿಗಳ ಬೆನ್ನಲ್ಲೇ ಅಮೆರಿಕ ಈ ಕ್ರಮ ಕೈಗೊಂಡಿದೆ.

ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಹುತಿ ಪಡೆಗಳು ನಿಯೋಜಿಸಿದ್ದ ಯುದ್ಧನೌಕೆ ಧ್ವಂಸಕ ಕ್ಷಿಪಣಿ ಮೇಲೆ ಅಮೆರಿಕ ಪಡೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಯೆಮೆನ್‌ನ ಬಂದರು ಪಟ್ಟಣ ಅಲ್‌– ಹುಡೇದ್ಹ ಬಳಿ ಕ್ಷಿಪಣೆ ಮೇಲೆ ದಾಳಿ ನಡೆದಿದೆ ಎಂದು ಹುತಿ ನೃತೃತ್ವದ ಅಲ್‌– ಮಸೀರ ಸುದ್ದಿವಾಹಿನಿ ಸುದ್ದಿ ಬಿತ್ತರಿಸಿದೆ. ಆದರೆ ದಾಳಿಯಿಂದ ಉಂಟಾಗಿರುವ ನಷ್ಟದ ಕುರಿತು ಮಾಹಿತಿ ನೀಡಿಲ್ಲ.

ಕೆಂಪು ಸಮುದ್ರದಲ್ಲಿ ಕಾರ್ಯಾಚರಿಸುವ ಹಡಗುಗಳನ್ನು ಗುರಿಯಾಗಿಸಿಕೊಂದು ಹುತಿ ಬಂಡುಕೋರ ಪಡೆಯು ಅಕ್ಟೋಬರ್‌ನಿಂದಲೂ ದಾಳಿ ನಡೆಸುತ್ತಿದೆ. ಆದರೆ, ಅದು ಇದೇ ಮೊದಲ ಬಾರಿಗೆ ಅಮೆರಿಕದ ಹಡಗನ್ನು ನೇರವಾಗಿ ಗುರಿಯಾಗಿಸಿ ದಾಳಿ ನಡೆಸಿದ್ದು. ಈ ದಾಳಿಗೆ ಅಮೆರಿಕ ಪ್ರತ್ಯುತ್ತರ ನೀಡಿದೆ.

ಈ ಮೂಲಕ ಕೆಂಪು ಸಮುದ್ರದಲ್ಲಿ ಅಮೆರಿಕ– ಹುತಿ ನಡುವಿನ ಸಂಘರ್ಷವು ಮತ್ತಷ್ಟು ತೀವ್ರವಾಗಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT