ಲಂಡನ್/ಇಸ್ಲಾಮಾಬಾದ್ : ಮಕ್ಕಳ ಹಕ್ಕು ಹೋರಾಟ ಕಾರ್ಯಕರ್ತೆ ಮಲಾಲ ಯೂಸುಫ್‌ಝೈ ಅವರು ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರ, ತತ್ವಜ್ಞಾನ ಮತ್ತು ಅರ್ಥಶಾಸ್ತ್ರ ಅಧ್ಯಯನಕ್ಕೆ ಪ್ರವೇಶ ಬಯಸಿ, ಸಂದರ್ಶನ ಎದುರಿಸಿದ್ದಾರೆ.

ಪಾಕಿಸ್ತಾನದ ಪ್ರಧಾನ ಮಂತ್ರಿಯಾಗುವ ಆಶಯವನ್ನು ಮಲಾಲ ಅವರು ಹಲವು ಸಂದರ್ಶನಗಳಲ್ಲಿ ಹೇಳಿದ್ದರು.

‘ಸಂದರ್ಶನ ಸರಳವಾಗಿರಲಿಲ್ಲ. ಇತರ ವಿದ್ಯಾರ್ಥಿಗಳಂತೆ ಫಲಿತಾಂಶವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರರ ಅಧೀನದಲ್ಲಿದ್ದ ಸಂದರ್ಭದ ತಮ್ಮ ಅನುಭವಗಳನ್ನು ಮಲಾಲ ಅವರು, ಪತ್ರಕರ್ತ ಕ್ರಿಸ್ಟಿನಾ ಲಾಂಬಾ ಜೊತೆ ಸೇರಿ ‘ಐ ಆ್ಯಮ್ ಮಲಾಲ’ ಕೃತಿಯಲ್ಲಿ ದಾಖಲಿಸಿದ್ದಾರೆ. ‘ಇದು ತತ್ವಜ್ಞಾನ, ರಾಜಕೀಯಶಾಸ್ತ್ರ ಮತ್ತು ಆರ್ಥಶಾಸ್ತ್ರದ ಅಧ್ಯಯನ ಕೈಗೊಳ್ಳುವ ಆಕಾಂಕ್ಷೆಗೆ ಪ್ರೇರಣೆ ನೀಡಿತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.