ವಾಷಿಂಗ್ಟನ್(ಪಿಟಿಐ): ಉಗ್ರರ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿರುವ ಅಮೆರಿಕ, ವಿಶ್ವದ ಯಾವುದೇ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ(ಐಎಸ್) ದಮನಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ರಾಷ್ಟ್ರೀಯ ಭದ್ರತಾ ಪಡೆಗೆ ಅಧ್ಯಕ್ಷ ಬರಾಕ್ ಒಬಾಮ ಅವರು ಸೂಚಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಯೋತ್ಪಾದನಾ ತಡೆ ಹಾಗೂ ಐಎಸ್ ಸಂಘಟನೆಯ ನಿರ್ನಾಮ ಕಾರ್ಯವನ್ನು ತೀವ್ರಗೊಳಿಸುವ ಬಗ್ಗೆ ಚರ್ಚಿಸಲಾಗಿದೆ.

ಅಗತ್ಯ ಬಿದ್ದರೆ ಯಾವುದೇ ದೇಶದಲ್ಲಿ ಐಎಸ್ ಉಗ್ರ ಸಂಘಟನೆ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಒಬಾಮ ಅವರು ಒತ್ತಿ ಹೇಳಿದ್ದಾರೆ ಎಂದು ಅಮೆರಿಕದ ಶ್ವೇತ ಭವನ ಹೇಳಿದೆ.

ಐಎಸ್ ಸೇರಿದಂತೆ ಇತರ ಉಗ್ರ ಸಂಘಟನೆಗಳ ಕೃತ್ಯಗಳು ವಿಶ್ವದ ರಾಷ್ಟ್ರಗಳಲ್ಲಿ ಆಡಳಿತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಲಿಬಿಯಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಹಿಂಸೆಗೆ ತಡೆಯೊಡ್ಡಿ ಶಾಂತಿ ಮುರುಸ್ಥಾಪನೆ ಹಾಗೂ ಸರ್ಕಾರಗಳಿಗೆ ಶಕ್ತಿ ತುಂಬುವ ಕೆಲಸಕ್ಕೆ ರಾಷ್ಟ್ರೀಯ ಭದ್ರತಾಪಡೆಗಳು ಹೆಚ್ಚು ಒತ್ತು ಕೊಡಬೇಕು ಎಂದು ಒಬಾಮ ಅವರು ಸೂಚಿಸಿದ್ದಾಗಿ ವರದಿಯಾಗಿದೆ.

ಇರಾಕ್ ಮತ್ತು ಸಿರಿಯಾದಲ್ಲಿ ಐಎಸ್ ಸಂಘಟನೆ ದಮನಕ್ಕೆ ಜಾಗತಿಕ ಒಕ್ಕೂಟ ರಾಷ್ಟ್ರಗಳ ಪಾಲುದಾರಿಕೆಯಲ್ಲಿ ಅಮೆರಿಕ ಎಲ್ಲ ಬಗೆಯ ಮಿಲಿಟರಿ ಕಾರ್ಯಾಚರಣೆ ಹಾಗೂ ರಾಜತಾಂತ್ರಿಕ ನೆರವಿನೊಂದಿಗೆ ಹೋರಾಟ ಮುಂದುವರೆಸಲಿದೆ ಎಂದು ಶ್ವೇತ ಭವನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.