ವಾಷಿಂಗ್ಟನ್ : ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅಂಡ್ ಸಿರಿಯಾ (ಐಸಿಸ್) ಮುಖ್ಯಸ್ಥ ಅಬೂಬಕರ್ ಅಲ್ ಬಾಗ್ದಾದಿ ಇನ್ನೂ ಜೀವಂತವಿದ್ದಾನೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಮುಖ್ಯಸ್ಥ ಜಿಮ್ ಮ್ಯಾಟಿಸ್ ಶಂಕಿಸಿದ್ದಾರೆ.
‘ಬಾಗ್ದಾದಿ ಸತ್ತಿಲ್ಲ. ಇನ್ನೂ ಜೀವಂತ ಇದ್ದಾನೆ ಎಂಬ ನಂಬಿಕೆ ನಮ್ಮದು’ ಎಂದು ಅವರು ಹೇಳಿದ್ದಾರೆ.
ಇದೇ ಮೇ ತಿಂಗಳಲ್ಲಿ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸಿದ ದಾಳಿಯಲ್ಲಿ ಬಾಗ್ದಾದಿ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಹರಡಿತ್ತು.