ಒಟ್ಟಾವ, ಕೆನಡಾ (ಐಎಎನ್ಎಸ್): ಇಲ್ಲಿನ ಸರ್ಕಾರವು ಕನಿಷ್ಕ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದೆ. ‘ದೇಶದ ರಕ್ಷಣೆಗೆ ನಿರಂತರ ಜಾಗೃತಾವಸ್ಥೆ ಅಗತ್ಯ’ ಎಂದು ಕೆನಡಾ ಪ್ರಧಾನಿ ಸ್ಟೀಫನ್ ಹ್ಯಾರ್ಪ್ರ್ ಈ ವೇಳೆ ಹೇಳಿದರು.

1985ರ ಜೂನ್ 23ರಂದು ಏರ್ ಇಂಡಿಯಾದ ಕನಿಷ್ಕ ವಿಮಾನ ಟೊರಂಟೊದಿಂದ ಲಂಡನ್ಗೆ ಹಾರುತ್ತಿದ್ದಾಗ ಸಿಖ್ ಉಗ್ರರು ನಡೆಸಿದ ಬಾಂಬ್ ದಾಳಿಯಿಂದ ಅಪಘಾತಕ್ಕೀಡಾಗಿ 329 ಪ್ರಯಾಣಿಕರು ಮೃತಪಟ್ಟಿದ್ದರು. ಮೃತರಲ್ಲಿ ಹೆಚ್ಚಿನವರು ಭಾರತ ಮೂಲದವರಾಗಿದ್ದರು.

ಈ ಮಧ್ಯೆ, ಐರ್ಲೆಂಡ್ನಲ್ಲೂ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ಭಾರತದ ವಿದೇಶಾಂಗ ರಾಜ್ಯ ಸಚಿವ ವಿ.ಕೆ. ಸಿಂಗ್, ಐರಿಷ್ ವಿದೇಶಾಂಗ ಸಚಿವ ಚಾರ್ಲೀ ಫ್ಲನಗಾನ್ ಹಾಗೂ ಕೆನಡಾ ನ್ಯಾಯಾಂಗ ಸಚಿವ ಪೀಟರ್ ಮ್ಯಾಕೇ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.