ಬೀಜಿಂಗ್ (ಐಎಎನ್‌ಎಸ್): ಚೀನಾ ಕಳುಹಿಸಿರುವ ಚಾಂಗ್–3 ಉಪಗ್ರಹ ಚಂದ್ರನ ಮೇಲೆ ಶನಿವಾರ ಯಶಸ್ವಿಯಾಗಿ ಇಳಿದಿದೆ.
ಚೀನಾ ಕಾಲಮಾನ ಶನಿವಾರ ರಾತ್ರಿ 9 ಗಂಟೆಗೆ ದೇಶದ ಮೊದಲ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದಿದೆ ಎಂದು ಬೀಜಿಂಗ್ ಬಾಹ್ಯಾಕಾಶ ನಿಯಂತ್ರಣ ಕೇಂದ್ರ ತಿಳಿಸಿದೆ.

ಇದರೊಂದಿಗೆ ಚೀನಾ, ಚಂದ್ರನ ನೆಲದ ಮೇಲೆ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ಚಂದ್ರನ ಅಂಗಳದ ಮೇಲೆ ನೌಕೆ ಇಳಿಸಿದ್ದವು.

ಚಾಂಗ್–3 ಚೀನಾದ ಎರಡನೇ ಚಂದ್ರಯಾನ ಯೋಜನೆಯಾಗಿದ್ದು, ನೌಕೆಯು ಭೂಮಿಯಿಂದ ಚಂದ್ರನ ಮೇಲೆ ಇಳಿದು ಹಿಂತಿರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.