ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವರ್ಷದ ಆರಂಭದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದು, ನಂತರ ವೈದ್ಯರು ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ ಎಂದು ಶ್ವೇತಭವನ ಹೇಳಿದೆ.

ಟ್ರಂಪ್ ಆರೋಗ್ಯ ಕುರಿತ ಪ್ರಶ್ನೆಗೆ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ಈ ಮಾಹಿತಿ ನೀಡಿದ್ದಾರೆ. ಈ ಮೂಲಕ, ಟ್ರಂಪ್ ಆರೋಗ್ಯ ಕುರಿತ ಹೇಳಿಕೆಯನ್ನು ‘ಹಾಸ್ಯಾಸ್ಪದ’ ಎಂದು ತಳ್ಳಿಹಾಕಲಾಗಿದೆ.

ಜೆರುಸಲೇಂ ಕುರಿತು ಬುಧವಾರ ಮಾಡಿದ್ದ ಭಾಷಣದ ಕೊನೆಯಲ್ಲಿ 71 ವರ್ಷದ ಟ್ರಂಪ್ ಅಸ್ಪಷ್ಟವಾಗಿ ಮಾತನಾಡಿದ್ದರು ಮತ್ತು ‘ಗಾಡ್ ಬ್ಲೆಸ್ ಅಮೆರಿಕ’ ಎಂದು ತಪ್ಪಾಗಿ ಉಚ್ಚರಿಸಿದ್ದರು. ಇದರಿಂದ ಅವರ ಆರೋಗ್ಯ ಕುರಿತು ಅನುಮಾನ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.