ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ತಪ್ಪಿಸುವ ಯತ್ನಕ್ಕೆ ತಡೆ: ಜಿ-20 ನಿರ್ಣಯ

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸೇಂಟ್ ಪೀಟರ್ಸ್‌ಬರ್ಗ್ (ಪಿಟಿಐ): ನಿಶ್ಚಿತ ಅಲ್ಲದ ವರಮಾನದ ಮೇಲೆ ಪರಿಣಾಮಕಾರಿಯಾಗಿ ತೆರಿಗೆ ವಿಧಿಸುವುದು ಬಹಳ ಸವಾಲಿನ ವಿಷಯ ಎಂಬುದನ್ನು ಪ್ರಧಾನಿ ಮನಮೋಹನ್ ಸಿಂಗ್ ಸೇರಿ ಜಿ-20 ನಾಯಕರು ಒಪ್ಪಿಕೊಂಡರು.

ತೆರಿಗೆ ಪಾವತಿಸದಿರುವುದು, ಹಾನಿಕಾರಕ ಪದ್ಧತಿಗಳು ಮತ್ತು ಕಟ್ಟುನಿಟ್ಟು ತೆರಿಗೆ ಪದ್ಧತಿ ನಿರ್ಮೂಲನೆ ಮಾಡಲು ನಿಯಮ ಬದಲಿಸುವ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅವರು ಶುಕ್ರವಾರ ಇಲ್ಲಿ ಶಪಥ ಮಾಡಿದರು.

ಈ ಸಂಬಂಧ ಮುಂದುವರಿದ ಮತ್ತು ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಜಿ-20 ಶೃಂಗಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಬಹುರಾಷ್ಟ್ರೀಯ ಕಂಪೆನಿಗಳು ತೆರಿಗೆ ಕಡಿತಕ್ಕೆ ಮುಂದಾಗುವುದನ್ನು ಕಾನೂನಿನಲ್ಲಿ ಪ್ರೋತ್ಸಾಹಿಸಬಾರದು ಎಂದೂ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಭ್ರಷ್ಟಾಚಾರ ತೊಡೆದು ಹಾಕಲು,  ಜಾಗತಿಕ ಮಟ್ಟದಲ್ಲಿ ಮಾಹಿತಿ ವಿನಿಮಯ ಮತ್ತು ಪರಸ್ಪರ ಸಹಕಾರ ನೀಡುವ ಕುರಿತಂತೆಯೂ ಶೃಂಗಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT