ಹಾಂಕಾಂಗ್ (ಎಎಫ್ಪಿ): ಎರಡು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ 38 ಮಂದಿ ಮೃತಪಟ್ಟಿರುವ ಘಟನೆ ಹಾಂಗ್ಕಾಂಗ್ನಲ್ಲಿ ಮಂಗಳವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ದಿನದ ಅಂಗವಾಗಿ ವಿಕ್ಟೋರಿಯಾ ಬಂದರಿನಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಬಾಣ-ಬಿರುಸುಗಳ ಪ್ರದರ್ಶನವನ್ನು ನೋಡಲು 120ಕ್ಕೂ ಹೆಚ್ಚು ಪ್ರಯಾಣಿಕರು ಹಾಂಗ್ಕಾಂಗ್ ಎಲೆಕ್ಟ್ರಿಕ್ ಕಂಪನಿಯ ದೋಣಿಯಲ್ಲಿ ಹೋಗುತ್ತಿದ್ದಾಗ ಲಮ್ಮಾ ದ್ವೀಪದ ಬಳಿ ಈ ಅಪಘಾತ ಸಂಭವಿಸಿದೆ. 100ಕ್ಕೂ ಅಧಿಕ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಂಬತ್ತು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.