ಲಂಡನ್, (ಪಿಟಿಐ):  ನಿದ್ದೆ ಮಾಡಲು ಗುಳಿಗೆಯ ಮೊರೆ ಹೋಗುವವರು ಇನ್ನು ಮುಂದೆ ನಿರಾಳವಾಗಿರಬಹುದು. ಏಕೆಂದರೆ ಚೆನ್ನಾಗಿ ನಿದ್ದೆ ಬರಿಸುವ ಟೋಪಿಯೊಂದನ್ನು ಅಮೆರಿಕದಲ್ಲಿ ಕಂಡುಹಿಡಿಯಲಾಗಿದೆ.

ಅಮೆರಿಕದ ಪರಿಣತ ವೈದ್ಯರ ತಂಡವೊಂದು ರಾತ್ರಿ ವೇಳೆ ಧರಿಸುವ ನಿದ್ರಾಟೋಪಿಯೊಂದನ್ನು ನಿರ್ಮಿಸಿದ್ದು ಅದನ್ನು ಧರಿಸಿ ಮಲಗಿದಲ್ಲಿ ಮಿದುಳು ಶಾಂತವಾಗುವುದರ ಮೂಲಕ ನಿದ್ದೆ ಚೆನ್ನಾಗಿ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೀರಿನಿಂದ ತುಂಬಿರುವ ಸಣ್ಣ ಸಣ್ಣ ಕೊಳವೆಗಳು ಈ ಟೋಪಿಯೊಳಗಿದ್ದು ಇದು ಮಿದುಳಿನಲ್ಲಿರುವ ಕಾರ್ಟೆಕ್ಸ್ ಅನ್ನು ತಂಪಾಗಿಸುವುದರಿಂದ ಅದನ್ನು ಧರಿಸುವ ವ್ಯಕ್ತಿ ಸುಖನಿದ್ದೆಗೆ ಜಾರುತ್ತಾನೆ ಎಂದು `ಡೈಲಿ ಮೇಲ್~ ಪತ್ರಿಕೆ ವರದಿ ಮಾಡಿದೆ.

ಸಾಧಾರಣವಾಗಿ ನಿದ್ದೆ ಸಮಸ್ಯೆಯಿಂದ ಬಳಲುವವರು ನಿದ್ದೆ ಗುಳಿಗೆಗಳನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ಶೇ. 25ರಷ್ಟು ರೋಗಿಗಳು ಮಾತ್ರ ಇದರಿಂದ ತೃಪ್ತಿ ಪಡೆಯುತ್ತಿದ್ದಾರೆ.

`ರೋಗಿಯ ಬಯಕೆ ಮತ್ತು ಪ್ರಸ್ತುತ ದೊರಕುತ್ತಿರುವ ವೈದ್ಯಕೀಯ ಸೇವೆಯ ನಡುವೆ ಸಾಕಷ್ಟು ಅಂತರವಿದೆ~ ಎಂದು ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ಡಾ. ಎರಿಕ್ ನಾಫಿಂಜರ್ ಅಭಿಪ್ರಾಯಪಟ್ಟ್ದ್ದಿದು ಇದರ ಫಲಿತಾಂಶ ಕುರಿತು ವ್ಯಾಪಕವಾಗಿ ಪರೀಕ್ಷೆಗಳು ನಡೆಯಬೇಕಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.