ಇಸ್ಲಾಮಾಬಾದ್/ನವದೆಹಲಿ: ಭಾರತದಲ್ಲಿನ ಪಾಕಿಸ್ತಾನ ಹೈಕಮಿಷನರ್ ಸೊಹೈಲ್ ಮಹಮೂದ್ ಅವರು ಗುರುವಾರ ರಾತ್ರಿ ಇಸ್ಲಾಮಾಬಾದ್ನಿಂದ ಹಿಂತಿರುಗಿದ್ದಾರೆ.
ರಾಜತಾಂತ್ರಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆರೋಪಿಸಿದ ಬಳಿಕ ಸೊಹೈಲ್ ಅವರನ್ನು ಸಮಾಲೋಚನೆಗಾಗಿ ಇಸ್ಲಾಮಾಬಾದ್ಗೆ ಕರೆಸಿಕೊಳ್ಳಲಾಗಿತ್ತು.
ಶುಕ್ರವಾರ ನವದೆಹಲಿಯಲ್ಲಿ ನಡೆಯಲಿರುವ ಪಾಕಿಸ್ತಾನದ ರಾಷ್ಟ್ರೀಯ ದಿನದ ಅಂಗವಾಗಿ ಸೊಹೈಲ್ ಅವರು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಬೆಳಿಗ್ಗೆ ಅವರು ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ಭಾಷಣ ಮಾಡಲಿದ್ದಾರೆ.