ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಸ್ಫೋಟ: 25ಸಾವು

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಪೆಶಾವರ (ಪಿಟಿಐ): ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಸತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಆಫ್ಘನ್‌ ಗಡಿಭಾಗದ ಪರಚಿನಾರ್‌  ನಲ್ಲಿರುವ ಈದ್ಗಾ ಬಜಾರ್‌ನ ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ 8.50ಕ್ಕೆ ಘಟನೆ ಸಂಭವಿಸಿದೆ. ತರಕಾರಿ ತುಂಬಿ ತರುವ ಪೆಟ್ಟಿಗೆಯೊಂದರಲ್ಲಿ ಬಾಂಬ್‌ ಇಡಲಾಗಿತ್ತು, ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಅದು ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಪಾಕಿಸ್ತಾನಕ್ಕೆ ಬೇಕಾಗಿದ್ದ ಲಷ್ಕರ್‌

ಎ – ಝಾಂಗ್ವಿ ಸಂಘಟನೆಯ ಮುಖ್ಯಸ್ಥ, ಭಯೋತ್ಪಾದಕ ಆಸಿಫ್‌ ಛೋಟು ಹಾಗೂ ಅವನ ಮೂವರು ಸಹಚರರನ್ನು ಪಾಕ್‌ ಸೇನೆ ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ  ಈ ಸ್ಫೋಟ ಸಂಭವಿಸಿದೆ.

ಹೊಣೆ ಹೊತ್ತ ಟಿಐಟಿ: ಸ್ಫೋಟದ ಹೊಣೆಯನ್ನು ಪಾಕಿಸ್ತಾನದ ತೆಹರೀಕ್‌ ಎ– ತಾಲಿಬಾನ್‌ ಸಂಘಟನೆ ಹೊತ್ತುಕೊಂಡಿದೆ. ಆಸಿಫ್‌ ಛೋಟು ಹಾಗೂ ಆತನ ಸಹಚರರ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ನಡೆಸಿದ್ದೇವೆ ಎಂದು ಸಂಘಟನೆಯ ವಕ್ತಾರ ಉಮರ್‌ ಖುರಸಾನಿ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT