ಮ್ಯೂನಿಚ್ (ಜರ್ಮನಿ) : ಜಾಗತಿಕ ಮಟ್ಟದಲ್ಲಿ ಪಾಶ್ಚಿಮಾತ್ಯರ ಪ್ರಭಾವವನ್ನು ಕೊನೆಗೊಳಿಸಬೇಕು ಎಂದು ರಷ್ಯಾ ಹೇಳಿದೆ.
‘ಪ್ರತಿಯೊಂದು ದೇಶ ತನ್ನದೇ ಆದ ಸಾರ್ವಭೌಮತ್ವ ಹೊಂದಿದೆ. ಪಾಶ್ಚಿಮಾತ್ಯ ಪ್ರಭಾವ ಕೊನೆಗೊಂಡು ಪ್ರಜಾಸತ್ತಾತ್ಮಕ ಮಾದರಿಯ ಜಗತ್ತು ನಿರ್ಮಾಣವಾಗುವ ಆಶಾವಾದ ಹೊಂದಿದ್ದೇನೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯಿ ಲಾವ್ರೊವ್ ಹೇಳಿದ್ದಾರೆ.