ಕಂದಹಾರ್: ಆಫ್ಘಾನಿಸ್ತಾನದ ವಿವಿಧೆಡೆ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟ 56 ಮಂದಿಯಲ್ಲಿ ಐವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಅಧಿಕಾರಿಗಳು ಎಂದು ತಿಳಿದು ಬಂದಿದೆ.

ದಕ್ಷಿಣ ಕಂದಹಾರ್‌ನ ಗವರ್ನರ್ ಕಚೇರಿ ಆವರಣದ ಸೋಫಾದಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು ಯುಎಇ ಅಧಿಕಾರಿಗಳು ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.

ಬಾಂಬ್ ಸ್ಫೋಟದಲ್ಲಿ ಕಂದಹಾರ್‌ನ ಗವರ್ನರ್ ಹುಮಾಯುನ್ ಅಜೀಜ್ ಮತ್ತು ಯುಎಇ ರಾಯಭಾರಿ ಜುಮಾ ಮೊಹಮ್ಮದ್ ಅಬ್ದುಲ್ಲ ಅಲ್ ಕಾಬಿ ಗಾಯಗೊಂಡಿದ್ದಾರೆ.

ಇದಕ್ಕೂ ಮುನ್ನ ಕಾಬೂಲ್‌ನ ಸಂಸತ್ ಬಳಿ ಸಂಭವಿಸಿದ ಅವಳಿ ಸ್ಫೋಟದಲ್ಲಿ 36 ಮಂದಿ ಮೃತಪಟ್ಟು, 80 ಮಂದಿ ಗಾಯಗೊಂಡಿದ್ದರು. ‘ಅಮೆರಿಕ ಬೆಂಬಲಿತ ಪಡೆಗಳು ಅಲ್–ಕೈದಾ ಮತ್ತು ಐಎಸ್ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗೆ ಪ್ರತೀಕಾರವಾಗಿ ತಾಲಿಬಾನ್ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಘಟನೆಯಿಂದ ಯುಎಇ ಜೊತೆಗಿನ ಬಾಂಧವ್ಯಕ್ಕೆ ಧಕ್ಕೆಯಾಗದು’ ಎಂದು ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.