ಪಟ್ಟಿಯಲ್ಲಿ ಉಕ್ಕು ಉದ್ಯಮಿ ಲಕ್ಷ್ಮಿ ಎನ್. ಮಿತ್ತಲ್ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ₹1.02 ಲಕ್ಷ ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ. ಇವರ ಸಂಪತ್ತು ಕಳೆದ ವರ್ಷಕ್ಕಿಂತ ₹5,840 ಕೋಟಿಯಷ್ಟು ಹೆಚ್ಚಳವಾಗಿದೆ. ಲಂಡನ್ನಲ್ಲಿರುವ ಹಿಂದುಜಾ ಸಹೋದರರಾದ ಶ್ರೀಚಂದ್, ಗೋಪಿ, ಜಿನಿವಾದಲ್ಲಿರುವ ಪ್ರಕಾಶ್ ಹಾಗೂ ಅಶೋಕ್ ಒಡೆತನದ ಅಶೋಕ್ ಲೇಲ್ಯಾಂಡ್, ಇಂಡಸ್ಇಂಡ್ ಬ್ಯಾಂಕ್ ಹಾಗೂ ಇತರ ಸಂಸ್ಥೆಗಳ ಆದಾಯ ಹೆಚ್ಚಳವಾಗಿದೆ ಎಂದು ಹೇಳಿದೆ.