ಇಸ್ಲಾಮಾಬಾದ್ (ಪಿಟಿಐ): ದೇಶದ ರಾಜಕೀಯ ವಲಯದಲ್ಲಿ ನಡುಕ ಹುಟ್ಟಿಸಿರುವ ವಿವಾದಿತ ಮೆಮೊಗೇಟ್ ಹಗರಣವನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ ರಚಿಸಿರುವ ನ್ಯಾಯಾಂಗ ಆಯೋಗ ಸೋಮವಾರ ವಿಚಾರಣೆ ಆರಂಭಿಸಿತಾದರೂ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ.

ಆಯೋಗದ ಎದುರು ಸೋಮವಾರ ಹಾಜರಾಗಿ ಹೇಳಿಕೆ ನೀಡಬೇಕಿದ್ದ ಪಾಕ್ ಮೂಲದ ಅಮೆರಿಕದ ವಾಣಿಜ್ಯೋದ್ಯಮಿ ಮನ್ಸೂರ್ ಇಜಾಜ್ ವಿಚಾರಣೆಗೆ ಗೈರು ಹಾಜರಾದರು.

ತಮ್ಮ ಕಕ್ಷಿದಾರ ಇಜಾಜ್‌ಗೆ ಖುದ್ದಾಗಿ ನ್ಯಾಯಾಲಯದ ಎದುರು ಹಾಜರಾಗಲು ಸಾಧ್ಯವಾಗದ ಕಾರಣ ಇದೇ 25ರವರೆಗೆ ಅವಕಾಶ ನೀಡುವಂತೆ ಅವರ ಪರ ವಕೀಲರು ಆಯೋಗಕ್ಕೆ ಅರ್ಜಿ ಸಲ್ಲಿಸಿದರು. `ಇಜಾಜ್‌ಗೆ ಪಾಕಿಸ್ತಾನಕ್ಕೆ ಬರುವ ಇರಾದೆ ಇದೆಯೋ ಅಥವಾ ಇಲ್ಲವೊ ಎಂಬುವುದನ್ನು ಮೊದಲು ಸ್ಪಷ್ಟಪಡಿಸಿ~ ಎಂದು ಆಯೋಗದ ಸದಸ್ಯರು ಕೇಳಿದರು.

ಸ್ವಿಟ್ಜರ್‌ಲೆಂಡ್‌ನ ಬರ್ನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಿಂದ ವೀಸಾ ಪಡೆಯುವ ಯತ್ನದಲ್ಲಿರುವ ಕಾರಣ ಇಜಾಜ್‌ಗೆ ಇಲ್ಲಿಗೆ ಬರಲು ಆಗಿಲ್ಲ ಎಂದು ವಕೀಲರು ಸಮಜಾಯಿಷಿ ನೀಡಿದರು.

ಜೀವ ಬೆದರಿಕೆ ಎದುರಿಸುತ್ತಿರುವ ಇಜಾಜ್‌ಗೆ ಪಾಕಿಸ್ತಾನದಲ್ಲಿ ಸೂಕ್ತ ಭದ್ರತೆಯ ಕೊರತೆ ಇದೆ ಎಂದು ಎಂದು ಸುದ್ದಿ ವಾಹಿನಿಯೊಂದು ಬಿತ್ತರಿಸಿದೆ. ಸೇನೆಯ ಯೋಧರರಿಂದ ಅವರಿಗೆ ಅಗತ್ಯ ರಕ್ಷಣೆ ನೀಡುವಂತೆ ಆಯೋಗ ಆದೇಶಿಸಿದೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.

ದಾಖಲೆ ನೀಡಲು ನಕಾರ
ಮೆಮೊ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜತಾಂತ್ರಿಕ ಹುಸೇನ್ ಹಕ್ಕಾನಿ ಮತ್ತು ಇಜಾಜ್ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ವಿವರಗಳನ್ನು ನೀಡಲು ಕೆನಡಾ ಮೂಲದ ಬ್ಲ್ಯಾಕ್‌ಬೆರಿ ಸಂಸ್ಥೆ ನಿರಾಕರಿಸಿದೆ.

ಇಬ್ಬರ ನಡುವೆ ನಡೆದಿರುವ ದೂರವಾಣಿ ಸಂಭಾಷಣೆಯ ವಿವರಗಳನ್ನು ನೀಡುವಂತೆ ಕೋರಿ ಪಾಕಿಸ್ತಾನ ಸಲ್ಲಿಸಿದ್ದ ಅರ್ಜಿಯನ್ನು ಬ್ಲ್ಯಾಕ್‌ಬೆರಿ ತಳ್ಳಿ ಹಾಕಿದೆ. ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಮೂರನೇ ವ್ಯಕ್ತಿಗಳಿಗೆ ಈ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಭಾಷಣೆ ನಡೆಸಿದ ವ್ಯಕ್ತಿಗಳು ಅರ್ಜಿ ಸಲ್ಲಿಸಿದಲ್ಲಿ ಮಾತ್ರ ವಿವರ ನೀಡಲಾಗುವುದೇ ಹೊರತು ಅನ್ಯ ವಕ್ತಿಗಳಿಗಲ್ಲ ಎಂದು ಬ್ಲ್ಯಾಕ್‌ಬೆರಿ ಸಂಸ್ಥೆ ಪಾಕಿಸ್ತಾನಕ್ಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.