ನವದೆಹಲಿ/ನೆ ಪೈ ತಾವ್ (ಪಿಟಿಐ):  ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಧ್ಯಾಹ್ನ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಮ್ಯಾನ್ಮಾರ್ ರಾಜಧಾನಿ ನೆ ಪೈ ತಾವ್ ತಲುಪಿದರು. ಮ್ಯಾನ್ಮಾರ್ ಆರೋಗ್ಯ ಸಚಿವ ಥಾಂಗ್ ಆಂಗ್ ಅವರು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

‘ಮ್ಯಾನ್ಮಾರ್ ತಲುಪಿದ್ದೇನೆ. ಆತ್ಮೀಯ ಸ್ವಾಗತ ಸಿಕ್ಕಿದೆ. ಇಂಥ ಸುಂದರ ದೇಶಕ್ಕೆ ಬಂದಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಬುಧವಾರ ಇಲ್ಲಿ ಆರಂಭವಾಗಲಿರುವ ೧೨ನೇ ಭಾರತ– ಆಸಿಯಾನ್ ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವರು.

‘ಆಗ್ನೇಯ ಏಷ್ಯಾ ದೇಶಗಳ ಸಂಘಟನೆಯು (ಆಸಿಯಾನ್) ಭಾರತದ ‘‘ಪೂರ್ವ ದೇಶಗಳೊಂದಿಗೆ ಸಕ್ರಿಯ ಸಂಬಂಧ’’ (ಆಕ್ಟ್ ಈಸ್ಟ್ ಪಾಲಿಸಿ)ನೀತಿಯ ಪ್ರಮುಖ ಭಾಗವಾಗಿದೆ’ ಎಂದು ಮ್ಯಾನ್ಮಾರ್ಗೆ ತೆರಳುವ ಮುನ್ನ ದೆಹಲಿಯಲ್ಲಿ ಮೋದಿ ಹೇಳಿದ್ದರು.
‘ನಮ್ಮ ಸಂಬಂಧಕ್ಕೆ ಹೊಸ ಆಯಾಮ ನೀಡುವುದು ಹೇಗೆ ಎನ್ನುವ ಬಗ್ಗೆ ಆಸಿಯಾನ್್ ಮುಖಂಡರ ಜತೆ ಸಮಾಲೋಚನೆಯನ್ನು ಎದುರು ನೋಡುತ್ತಿದ್ದೇನೆ’ ಎಂದೂ ಅವರು ತಿಳಿಸಿದ್ದರು.

ಬ್ರಿಸ್ಬೇನ್ನಲ್ಲಿ ನಡೆಯಲಿರುವ ಜಿ–೨೦ ಶೃಂಗಸಭೆಯಲ್ಲಿ ಮೋದಿ ಅವರು ಕಪ್ಪು ಹಣ ನಿಯಂತ್ರಣದಲ್ಲಿ ಅಂತರರಾಷ್ಟ್ರೀಯ ಸಹಕಾರದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಶೃಂಗ ಸಭೆಯ ಬಳಿಕ ಅವರು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೊಟ್ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸುವರು. ೨೮ ವರ್ಷಗಳ ನಂತರ ಆಸ್ಟ್ರೇಲಿಯಾಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ. ಈ ಮೊದಲು ೧೯೮೬ರಲ್ಲಿ ರಾಜೀವ್ ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದರು. ಮೆಲ್ಬರ್ನ್, ಸಿಡ್ನಿ ಹಾಗೂ ಕ್ಯಾನ್ಬೆರಾಗೆ ಕೂಡ ಮೋದಿ ಭೇಟಿ ನೀಡುವರು.

ಮೋದಿ ಅವರು, ೩೩ ವರ್ಷಗಳ ನಂತರ ಫಿಜಿಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಕೂಡ ಹೌದು. ೧೯೮೧ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಇಲ್ಲಿಗೆ ಬಂದಿದ್ದರು. ನವೆಂಬರ್ ೧೯ರಂದು ಫಿಜಿಗೆ ಭೇಟಿ ನೀಡುವ ಮೋದಿ, ಅಲ್ಲಿನ ಪ್ರಧಾನಿ ಫ್ರಾಂಕ್ ಬೈನಿಮರಮಾ ಅವರೊಂದಿಗೆ ಸಮಾಲೋಚನೆ ನಡೆಸುವರು.ಫಿಜಿಯ ಜನಸಂಖ್ಯೆ 849,00೦. ಈ ಪೈಕಿ ಶೇ ೩೭ರಷ್ಟು ಮಂದಿ ಭಾರತೀಯ ಮೂಲದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.