ನ್ಯೂಯಾರ್ಕ್: ‘ಆಪ್ಘಾನಿಸ್ತಾನ ಹಾಗೂ ಇತರ ನೆರೆಯ ರಾಷ್ಟ್ರಗಳ ಜತೆ ರಾಜತಾಂತ್ರಿಕ ಮಾರ್ಗದ ಮೂಲಕ ಸಂಬಂಧ ವೃದ್ಧಿಸಿಕೊಳ್ಳಿ’ ಎಂದು ಪಾಕಿಸ್ತಾನಕ್ಕೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಲೆಫ್ಟಿನೆಂಟ್ ಜನರಲ್ ಎಚ್.ಆರ್. ಮೆಕ್ಮಾಸ್ಟರ್ ಸಲಹೆ ನೀಡಿದ್ದಾರೆ.
ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಕ್ರಮವನ್ನು ಟೀಕಿಸಿದ ಅವರು, ‘ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು. ಬೇರೆ ದೇಶಗಳ ವಿರುದ್ಧ ಪಾಕಿಸ್ತಾನ ಉಗ್ರರನ್ನು ಬಳಸಿಕೊಳ್ಳುತ್ತಿದೆ. ಭಯೋತ್ಪಾದಕ ಮುಖಂಡರಿಗೆ ಗೌರವ ಸಲ್ಲಿಸುತ್ತದೆ’ ಎಂದು ಅವರು ಆರೋಪಿಸಿದ್ದಾರೆ.