ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ನಿರಾಶ್ರಿತರಿಗೆ ಫೋನ್‌ ಮಾರುವಂತಿಲ್ಲ: ಆದೇಶ

Last Updated 24 ಸೆಪ್ಟೆಂಬರ್ 2017, 19:29 IST
ಅಕ್ಷರ ಗಾತ್ರ

ಢಾಕಾ: ರೋಹಿಂಗ್ಯಾ ನಿರಾಶ್ರಿತರಿಗೆ ಮೊಬೈಲ್‌ ಫೋನ್‌ ಮಾರಾಟ ಮಾಡಬೇಡಿ ಎಂದು ದೂರವಾಣಿ ಕಂಪೆನಿಗಳಿಗೆ ಬಾಂಗ್ಲಾದೇಶ ಸರ್ಕಾರ ಆದೇಶಿಸಿದೆ. ಭದ್ರತಾ ದೃಷ್ಟಿಯಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಸದ್ಯ ಸುಮಾರು ನಾಲ್ಕೂವರೆ ಲಕ್ಷದಷ್ಟು ರೋಹಿಂಗ್ಯಾ ನಿರಾಶ್ರಿತರಿದ್ದು, ಇವರ ಪೈಕಿ ಯಾರೊಬ್ಬರಿಗಾದರೂ ಮೊಬೈಲ್‌ ಫೋನ್‌ ಮಾರಾಟ ಮಾಡಲು ಪ್ರಯತ್ನಿಸಿದರೆ ದಂಡ ತೆರಬೇಕಾದೀತು ಎಂದು ಸರ್ಕಾರ ಎಚ್ಚರಿಸಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ ಸಿಮ್‌ ಕಾರ್ಡ್‌ಗಳನ್ನು ಪೂರೈಸದಂತೆ ಆದೇಶಿಸಲಾಗಿದೆ. ಇನ್ನು ಮುಂದೆ ಫೋನ್‌ಗಳನ್ನು ಕೂಡ ಮಾರಾಟ ಮಾಡುವಂತಿಲ್ಲ’ ಎಂದು ದೂರಸಂಪರ್ಕ ಸಚಿವಾಲಯದ ಹಿರಿಯ ಅಧಿಕಾರಿ ಇನಾಯಿತ್‌ ಹೇಳಿದ್ದಾರೆ.

‘ಮಾನವೀಯತೆಯ ದೃಷ್ಟಿಯಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ ಬಾಂಗ್ಲಾದೇಶ ಆಶ್ರಯ ನೀಡಿದೆ. ಆದರೆ ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಸರ್ಕಾರ  ತಯಾರಿಲ್ಲ. ಹೊಸತಾಗಿ ಬಾಂಗ್ಲಾದೇಶಕ್ಕೆ ಬಂದಿರುವ ನಿರಾಶ್ರಿತರಿಗೆ ಬಯೋಮೆಟ್ರಿಕ್ ಕಾರ್ಡ್‌ಗಳನ್ನು ನೀಡಿದ ನಂತರವೇ ಈ ನಿಷೇಧ ಹಿಂದಕ್ಕೆ ಪಡೆಯಲಾಗುವುದು’ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT