ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿಗಳು

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಭಾರತೀಯ ಮೂಲದ ವಕೀಲೆಗೆ ಅಮೆರಿಕದ ಗೌರವ
ವಾಷಿಂಗ್ಟನ್ (ಪಿಟಿಐ):
ಅಮೆರಿಕದಲ್ಲಿರುವ ಭಾರತೀಯ ಮೂಲದ ಖ್ಯಾತ ವಕೀಲೆ ಅನು ಪೆಶಾವರಿಯಾ ಅವರಿಗೆ ಅಮೆರಿಕ ಸರ್ಕಾರ  `ಅವಾರ್ಡ್ ಆಫ್ ಎಕ್ಸಲೆನ್ಸ್~ ಪ್ರಶಸ್ತಿ ನೀಡಿ ಗೌರವಿಸಿದೆ.

ಮಹಿಳಾ ವಲಸೆ ಹಕ್ಕುಗಳನ್ನು ಎತ್ತಿಹಿಡಿದ ಹಾಗೂ ಅದರ ಬಗ್ಗೆ ಸಾಮಾಜಿಕ ಅರಿವು ಮೂಡಿಸಿದ ಪೆಶಾವರಿಯ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ. ಅಮೆರಿಕ ಸರ್ಕಾರದ ಗೌರವಕ್ಕೆ ಪಾತ್ರರಾದ ಅನು ಪೆಶಾವರಿಯ ಅವರು ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿಯವರ ಸಹೋದರಿ.

ಬೃಹತ್ ಏರ್‌ಪೋರ್ಟ್ ನಿರ್ಮಾಣಕ್ಕೆ ಯೋಜನೆ
ಬೀಜಿಂಗ್ (ಪಿಟಿಐ):
ವಿಶ್ವದಲ್ಲೇ ಅತಿ ದೊಡ್ಡದಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಚೀನಾ ಸರ್ಕಾರ ಯೋಜನೆ ರೂಪಿಸಿದೆ.

ನಗರದ ಈಶಾನ್ಯ ಭಾಗದಲ್ಲಿ 15 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ವಿಮಾನ ನಿಲ್ದಾಣ, ಅಮೆರಿಕದ ಹಾರ್ಟ್ಸ್‌ಫೀಲ್ಡ್ ಜಾಕ್ಸನ್ ಅಟ್ಲಾಂಟ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಮೀರಿಸುವಷ್ಟು ದೊಡ್ಡದಾಗಿರುತ್ತದೆ ಎಂದು ಸರ್ಕಾರದ ಮಾಧ್ಯಮಗಳು ವರದಿ ಮಾಡಿವೆ. ಈ ನಿಲ್ದಾಣವನ್ನು ಉತ್ತರ ಚೀನಾದ ಹೆಬೈ ಪ್ರಾಂತ್ಯದಲ್ಲಿರುವ ಬೀಜಿಂಗ್ ಮತ್ತು ಲಾಂಗ್‌ಫಾಂಗ್ ಗಡಿ ಭಾಗದಲ್ಲಿ ನಿರ್ಮಿಸಲಾಗುತ್ತಿದೆ.

ಕತಾರ್: ವಿಶ್ವದ ಶ್ರೀಮಂತ ರಾಷ್ಟ್ರ
ದುಬೈ (ಪಿಟಿಐ)
: ಅಮೆರಿಕದ ನಿಯತಕಾಲಿಕೆ ಫೋಬ್ಸ್ ಇತ್ತೀಚೆಗೆ  ಬಿಡುಗಡೆ ಮಾಡಿರುವ ವಿಶ್ವದ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್ ಅಗ್ರ ಸ್ಥಾನ ಪಡೆದಿದೆ.

ತಲಾ ಆದಾಯದಲ್ಲಿ ಮುಂದಿರುವ 17ಲಕ್ಷ ಜನಸಂಖ್ಯೆಯ ಈ ಅರಬ್ ಒಕ್ಕೂಟದ ರಾಷ್ಟ್ರ ಕತಾರ್ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಮುಂದಿದೆ. ಇದೇ ಪಟ್ಟಿಯಲ್ಲಿ ಕುವೈತ್ 17ನೇ ಸ್ಥಾನದಲ್ಲಿದೆ.

 ಕತಾರ್, 2022ರಲ್ಲಿ ವಿಶ್ವ ಫುಟ್‌ಬಾಲ್ ಪಂದ್ಯಾವಳಿಯ ಆತಿಥ್ಯ ವಹಿಸಿಕೊಂಡಿದೆ. 2020ರಲ್ಲಿ ಒಲಿಂಪಿಕ್ಸ್ ಆತಿಥ್ಯಕ್ಕೂ ಮುಂದಾಗಿದೆ. ಅಲ್ಲದೇ, ಇಲ್ಲಿನ ಸರ್ಕಾರ ಮೂಲಸೌಲಭ್ಯ ಅಭಿವೃದ್ಧಿಗೆ ಹಣ ವ್ಯಯಿಸುತ್ತಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕತಾರ್ ರಾಷ್ಟ್ರವನ್ನು ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

ದಕ್ಷಿಣ ಸೈಬೀರಿಯಾ: ಪ್ರಬಲ ಭೂಕಂಪ

ನ್ಯೂಯಾರ್ಕ್ (ಎಪಿ): ದಕ್ಷಿಣ ಸೈಬೀರಿಯಾದಲ್ಲಿ ಭಾನುವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ಪ್ರಮಾಣ 6.8ರಷ್ಟು ದಾಖಲಾಗಿತ್ತು ಎಂದು ಅಮೆರಿಕದ ಭೂಗರ್ಭ ಇಲಾಖೆ ವರದಿ ಮಾಡಿದೆ.
ಭೂಕಂಪದಿಂದ ಯಾವುದೇ ಸಾವುನೋವು ಸಂಭವಿಸಿರುವ  ಬಗ್ಗೆ  ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT