ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ಪಡೆಯಲು ನಕಲಿ ದಾಖಲೆ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): 2008ರಿಂದ 2010ರ ಅವಧಿಯಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ಮತ್ತು ನುರಿತ ಕೆಲಸಗಾರರು ನಕಲಿ ದಾಖಲೆ ನೀಡಿ ವಿದೇಶಿ ಉದ್ಯೋಗಿಗಳ ವೀಸಾ ಯೋಜನೆಯಡಿ ಆಸ್ಟ್ರೇಲಿಯಾದಲ್ಲಿ ವೀಸಾ ಪಡೆದಿರುವುದು ಪತ್ತೆಯಾಗಿದೆ.

ಈಗ ಆಸ್ಟ್ರೇಲಿಯಾದಲ್ಲಿ ಅಧ್ಯಯನ ಅಥವಾ ಕೆಲಸ ಮಾಡುತ್ತಿರುವ ಭಾರತೀಯರ ಪೈಕಿ ಅರ್ಧದಷ್ಟು ಜನರು ನಕಲಿ ದಾಖಲೆಗಳನ್ನು ನೀಡಿ ವೀಸಾ ಪಡೆದಿರುವುದು ವಲಸೆ ಇಲಾಖೆ ಆಂತರಿಕ ದಾಖಲೆ ತಪಾಸಣೆಯಿಂದ ತಿಳಿದುಬಂದಿದೆ.
ಭಾರತೀಯರು ನಕಲಿ ದಾಖಲೆಗಳನ್ನು ಅತಿ ಜಾಗರೂಕತೆಯಿಂದ ಸೃಷ್ಟಿ ಮಾಡಿರುವುದರಿಂದ ಪತ್ತೆ ಕಾರ್ಯ ತುಂಬಾ ಪ್ರಯಾಸದ್ದಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದ ಪಾಸ್‌ಪೋರ್ಟ್ ವ್ಯವಸ್ಥೆಯಲ್ಲಿ ಅಷ್ಟೊಂದು ಗುಣಮಟ್ಟದ ತಂತ್ರಜ್ಞಾನ ಬಳಸದ ಕಾರಣ 2008ರಿಂದ 2010ರ ಅವಧಿಯಲ್ಲಿ ನಕಲಿ ದಾಖಲೆ ಸೃಷ್ಟಿ ಜಾಸ್ತಿಯಾಗಿತ್ತು. ನಂತರದ ದಿನಗಳಲ್ಲಿ ಈ ಹಾವಳಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT