ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ ಸ್ಫೋಟಕ ಪತ್ತೆ ಸಾಧನ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಮೆಲ್ಬರ್ನ್(ಪಿಟಿಐ): ಸ್ಫೋಟಕ ಪತ್ತೆ ಹಚ್ಚುವ ನಾಯಿಗಳಿಗಿಂತ 100 ಪಟ್ಟು ಹೆಚ್ಚು ಆಘ್ರಾಣ ಶಕ್ತಿ ಇರುವ ಲೇಸರ್ ಸಾಧನವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಹೊಸ ಸಾಧನವನ್ನು ಆವಿಷ್ಕಾರ ಮಾಡುವಲ್ಲಿ ಯಶಸ್ವಿಯಾಗಿದೆ.

`ಸ್ಫೋಟಕಗಳನ್ನು ಪತ್ತೆ ಹಚ್ಚುವ ಬೇರೆಲ್ಲ ಸಾಧನಗಳಿಗಿಂತ ಈ ಲೇಸರ್ ಸಾಧನ (ಸ್ಮಾರ್ಟ್) ನೂರು ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ' ಎಂದು ಸಂಶೋಧಕರ ತಂಡದ ಸಹ ಪ್ರಾಧ್ಯಾಪಕ ಚಾರ್ಲ್ಸ್ ಹರ್ಬ್ ತಿಳಿಸಿದ್ದಾರೆ.

ಕ್ಷಣ ಮಾತ್ರದಲ್ಲಿ ಸ್ಫೋಟಕಗಳನ್ನು ಪತ್ತೆ ಹಚ್ಚುವ ಈ ಸಾಧನವನ್ನು ಬಳಸಿ ಪ್ರಯಾಣಿಕರ ಚೀಲ, ಸೂಟ್‌ಕೇಸ್, ಸೇರಿದಂತೆ ವಿಮಾನ ನಿಲ್ದಾಣಗಳಲ್ಲಿ ಓಡಾಡುವವರ ಪೂರ್ತಿ ದೇಹದ ತಪಾಸಣೆಯನ್ನು ಸುಲಭವಾಗಿ ಮಾಡಬಹುದಾಗಿದೆ.

ಭದ್ರತಾ ಸಿಬ್ಬಂದಿಗಳನ್ನು ಎಚ್ಚರಿಸುವ ಕೆಲಸವನ್ನು ಈ ಸಾಧನ ಅತಿ ಶೀಘ್ರವಾಗಿ ಮಾಡುತ್ತದೆ. ಪೊಲೀಸರಿಗೆ ಸಹಾಯವಾಗುವಂತೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿಯೂ ಈ ಸಾಧನ ಉಪಯುಕ್ತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT