‘ಅಧಿಕ ರಕ್ತದೊತ್ತಡ, ಆಹಾರ ಕ್ರಮ ಮತ್ತು ಧೂಮಪಾನ ನಂತರ ವಿಶ್ವದಲ್ಲಿ ಅತಿಹೆಚ್ಚು ಜನರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ವಾಯುಮಾಲಿನ್ಯ. ಕಳೆದ ವರ್ಷ ಈ ಮಾಲಿನ್ಯದಿಂದಾಗಿ 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಮಾಲಿನ್ಯದ ಕಾರಣ ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.