ಮಾಸ್ಕೊ (ಪಿಟಿಐ): ಸೂಯಜ್ ಎಸ್‌ಎಲ್‌ವಿ ಬಾಹ್ಯಾಕಾಶ ನೌಕೆಯ ದುರಂತಕ್ಕೆ ನಿರ್ಮಾಣ ದೋಷವೇ ಕಾರಣ ಎಂದು ಪತ್ತೆಹಚ್ಚಲಾಗಿದೆ.ಆಗಸ್ಟ್ 24ರಂದು ದುರಂತಕ್ಕೀಡಾದ ಈ ನೌಕೆಯ ಎಂಜಿನ್‌ಗೆ ಉಡ್ಡಯನ ವೇಳೆಯಲ್ಲಿ ಸಮರ್ಪಕವಾಗಿ ಇಂಧನ ಪೂರೈಕೆಯಾಗಿಲ್ಲ. ಈ ವೈಫಲ್ಯದಿಂದಾಗಿ ನೌಕೆಯು ದುರಂತಕ್ಕೊಳಗಾಗಿದೆ ಎಂದು ಈ ಸಂಬಂಧ ತನಿಖೆ ಕೈಗೊಂಡಿದ್ದ ವಿಶೇಷ ಆಯೋಗವು ತಿಳಿಸಿದೆ.

ನೌಕೆಯು ಉಡ್ಡಯನಗೊಂಡ ವೇಳೆ ಕ್ಷಿಪಣಿಯಿಂದ ಬೇರ್ಪಡಲು ಸಾಧ್ಯವಾಗದೆ ದುರಂತಕ್ಕೀಡಾಗಿ ದಕ್ಷಿಣ ಸೈಬೀರಿಯಾದ ಅಲ್ತಾಯಿ ರಿಪಬ್ಲಿಕ್ ಪ್ರದೇಶದಲ್ಲಿ ಧರೆಗುರುಳಿತ್ತು.ರಷ್ಯದ ಬಾಹ್ಯಾಕಾಶ ಇತಿಹಾಸದಲ್ಲಿ ಹಿಂದೆಂದೂ ಇಂತಹ ನಷ್ಟ ಸಂಭವಿಸಿರಲಿಲ್ಲ ಎಂದು ರಿಯೊ ನೊವೊಸ್ತಿ ಸುದ್ದಿಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.