ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಗ್ಗುತ್ತಿರುವ ಬ್ರಹ್ಮಾಂಡ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ನಮ್ಮ ಬೃಹತ್ ಬ್ರಹ್ಮಾಂಡ ಒಂದೇ ಸಮನೆ  ಹಿಗ್ಗುತ್ತಿರುವ ಪ್ರಮಾಣವನ್ನು ವಿಜ್ಞಾನಿಗಳು ಇದೀಗ ಅತ್ಯಂತ ನಿಖರವಾಗಿ ಅಳೆದಿದ್ದಾರೆ.

ಬ್ರಹ್ಮಾಂಡದ ಹಿಗ್ಗುವಿಕೆಯ ವೇಗ ಅಧಿಕವಾಗುತ್ತಿರುವುದನ್ನು 1990ರ ದಶಕದ ಉತ್ತರಾರ್ಧದಲ್ಲಿ ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದರು. ಬ್ರಹ್ಮಾಂಡದ ವಯಸ್ಸು ಹಾಗೂ ಗಾತ್ರವನ್ನು ಅಂದಾಜಿಸಲು ಅದರ ವಿಸ್ತರಣೆಯ ಪ್ರಮಾಣ ಅರಿಯುವುದು ತುಂಬಾ ಮಹತ್ವದ್ದಾಗಿದೆ.

ವಿಶ್ವದ ವಿಸ್ತರಣೆ ಸೂಚಿಸುವ ಸಂಖ್ಯೆಗೆ ಖಗೋಳ ಪರಿಭಾಷೆಯಲ್ಲಿ `ಹಬಲ್ ಸ್ಥಿರಾಂಕ~ ಎನ್ನುತ್ತಾರೆ. ಇದೀಗ ನಾಸಾ ವಿಜ್ಞಾನಿಗಳು, ಸ್ಪಿಟ್‌ಜರ್ ದೂರದರ್ಶಕದ ನೆರವಿನಿಂದ ದೀರ್ಘ ತರಂಗಾಂತರದ ಅವಗೆಂಪು ಬೆಳಕಿನ ಕಿರಣಗಳನ್ನು ಆಧರಿಸಿ ಈ ಸ್ಥಿರಾಂಕವನ್ನು ನಿಖರವಾಗಿ ಅಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT