ಶನಿವಾರ, ಸೆಪ್ಟೆಂಬರ್ 21, 2019
21 °C

ಪತ್ರಿಕೆ ಹಂಚುತ್ತಲೇ ಎಸ್ಸೆಸ್ಸೆಲ್ಸಿಯಲ್ಲಿ ಶೇ 80ರಷ್ಟು ಅಂಕ ಸಾಧನೆ

Published:
Updated:
Prajavani

ಆಲಮೇಲ: ತಾಲ್ಲೂಕಿನ ದೇವಣಗಾಂವ ಗ್ರಾಮದ ವಿದ್ಯಾರ್ಥಿ ರಿಯಾಜ್‌ ಬಾಗವಾನ ನಿತ್ಯ ಪತ್ರಿಕೆ ಹಂಚುತ್ತಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 80.28ರಷ್ಟು ಅಂಕ ಸಾಧನೆಗೈದಿದ್ದಾನೆ.

ಇಲ್ಲಿನ ಪ್ರಗತಿ ಪರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ರಿಯಾಜ್‌, ಮೈಬೂಬ್‌ ಸಾಬ್‌ ಹಾಗೂ ಅಲ್ಲಮ್ಮ ದಂಪತಿಯ ಪುತ್ರ. ತಂದೆ–ತಾಯಿ ಕೂಲಿ ಮಾಡುತ್ತಿದ್ದಾರೆ.

ರಿಯಾಜ್‌ ಕೂಡ ಭಾನುವಾರ ಸೇರಿದಂತೆ ಶಾಲೆಗೆ ರಜೆ ಇದ್ದಾಗ ಖಾಲಿ ಕುಳಿತುಕೊಳ್ಳುವುದಿಲ್ಲ. ತಂದೆಯೊಂದಿಗೆ ದುಡಿಯಲು ಹೋಗುತ್ತಾನೆ. ಅದರ ನಡುವೆಯೇ ಓದಿಗೂ ಸಮಯ ಹೊಂದಿಸಿಕೊಂಡು, ಇದೀಗ ಉತ್ತಮ ಫಲಿತಾಂಶ ಪಡೆದಿದ್ದಾನೆ.

‘ಪ್ರತಿ ದಿನ ಬೆಳಿಗ್ಗೆ ಪತ್ರಿಕೆ ತೆಗೆದುಕೊಂಡು ಮನೆ ಮನೆಗೆ ವಿತರಿಸಿ ನಂತರ ಶಾಲೆಗೆ ಹೋಗುತ್ತಿದ್ದೆ. ಕೆಲ ಸಲ ಮೊದಲ ಪಿರಿಯಡ್ ತಪ್ಪುತ್ತಿತ್ತು. ಆದರೆ, ಶಿಕ್ಷಕರೂ ಕೂಡ ಅಂಥ ಸಂದರ್ಭದಲ್ಲಿ ಚೆನ್ನಾಗಿ ಸ್ಪಂದಿಸಿ, ಓದಿಗೆ ನೆರವಾಗಿದ್ದಾರೆ’ ಎಂದು ರಿಯಾಜ್‌ ಸ್ಮರಿಸಿದನು.

Post Comments (+)