ಶನಿವಾರ, ಮೇ 28, 2022
25 °C

ಮನೆಗೆಲಸಕ್ಕೆ ಭೇದವಿಲ್ಲ

ಜುಬೇದಾ ಬೇಗಂ ಕೊಟ್ಟೂರು Updated:

ಅಕ್ಷರ ಗಾತ್ರ : | |

Prajavani

ಮನೆಕೆಲಸ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ನನಗೆ ಇದರಲ್ಲಿ ಆಸಕ್ತಿ ಇದ್ದು, ಇದು ನನ್ನ ಹವ್ಯಾಸವೂ ಹೌದು. ಮನೆಯನ್ನು ಅಂದವಾಗಿರಿಸುವುದು, ವಸ್ತುಗಳನ್ನು ಜೋಡಿಸುವುದು ಕೂಡ ಒಂದು ಕಲೆ. 

ನನಗೆ ಮದುವೆಯಾಗಿ 35 ವಸಂತಗಳು ಕಳೆದಿವೆ. ನನ್ನ ಮಕ್ಕಳಿಗೆ ಈಗ ಪುಟ್ಟ ಮಕ್ಕಳಿವೆ. ಆದರೂ ನನಗೆ ಮನೆಗೆಲಸದಲ್ಲಿ ಆಸಕ್ತಿ ಕುಂದಿಲ್ಲ. ಈಗ ನನ್ನ ಪತಿ ಕೂಡ ಇದರಲ್ಲಿ ಭಾಗಿಯಾಗುತ್ತಾರೆ. ನಿವೃತ್ತಿಯ ನಂತರ ಅವರು ನನಗೆ ಸಹಾಯ ಮಾಡುತ್ತಾರೆ. ಮೊದಲು ಮಕ್ಕಳು ಶಾಲೆಗೆ ಹೋಗುವ ಮುನ್ನ ಸಹಾಯ ಮಾಡುತ್ತಿದ್ದರು. ರುಚಿಕಟ್ಟಾದ ಅಡುಗೆ, ಅಂದವಾಗಿ ಅಲಂಕರಿಸಿದ ಮನೆ, ಇದಕ್ಕೆ ಬೇಕಾದ ಸಮಯ ಪಾಲನೆ, ಮುಂದಾಲೋಚನೆ ಎಲ್ಲವನ್ನೂ ನಾವು ಒಟ್ಟಿಗೆ ನಿರ್ಧರಿಸುತ್ತೇವೆ. ಇದರಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಮೇಲು, ಕೀಳು ಎಂಬ ತಾರತಮ್ಯವೂ ಇಲ್ಲ. ಈಗ 2 ವರ್ಷದ ಮೊಮ್ಮಗನೂ ಇದರಲ್ಲಿ ಪಾಲ್ಗೊಳ್ಳುತ್ತಾನೆ. ಮುದ್ದಾಗಿ ಮಾತನಾಡುತ್ತ ನನಗೆ ನಿರ್ದೇಶನ ಮಾಡುತ್ತಾನೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.