ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಪು’ ನೀಡಿದ ತಾಣ

ನಮ್ಮನೆ ಹೆಸರು
Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ಮನೆ ಕಟ್ಟಲು ನಿವೇಶನ ಹುಡುಕಿದ್ದಾಯಿತು. ಪ್ಲಾನ್ ಸಿದ್ಧವಾಯಿತು. ಮನೆ ಕಟ್ಟುವುದಕ್ಕೂ ಶುರು ಮಾಡಿದೆವು. ಆಗ ಪ್ರಾರಂಭವಾಯಿತು ನೋಡಿ ಮನೆಗೆ ಹೆಸರಿಡುವ ಸಮಸ್ಯೆ. ದೇವರ ಹೆಸರಿಡಲು ಮಕ್ಕಳಿಂದ ವಿರೋಧ. ಹಿರಿಯರ ಹೆಸರಿಡಲು, ಯಾರ ಹೆಸರು ಇಡುವುದು ಎಂಬ ವಿವಾದ.

ಆಧುನಿಕ ಹೆಸರಿನ ಬಗ್ಗೆ ಮಾವನವರಿಗೆ ಮುನಿಸು. ಮನೆ  ಕಟ್ಟಿ ಮುಗಿದರೂ ಹೆಸರು ಸಿಗದೆ ಗೊಂದಲ. ಡ್ಯೂಪ್ಲೆಕ್ಸ್ ಮನೆಯಾಗಿದ್ದು ಗಾಳಿ ಬೆಳಕು ಧಾರಾಳವಾಗಿತ್ತು. ಹೊಸ ಮನೆಯ ಒಳಗೆ ಕಾಲಿಟ್ಟ ಕೂಡಲೆ ತಂಪಾದ ವಾತಾವರಣವಿತ್ತು. ಆಗ ಗೋಚರಿಸಿದ ಹೆಸರು ತಂಪು. ಎಲ್ಲರ ಮೆಚ್ಚುಗೆ ಗಳಿಸಿದ ನಮ್ಮ ಮನೆಯೀಗ ‘ತಂಪು’.
-ರಮಾ ಗೊವಿಂದರಾಜು, ಭೈರವೇಶ್ವರ ನಗರ

**
ನಿಮ್ಮ ಮನೆಯ ಹೆಸರೇನು? ಆ ಹೆಸರು ಇಡಲು ಕಾರಣವೇನು? ಇಮೇಲ್– metropv@prajavani.co.in ವಾಟ್ಸ್‌ಆ್ಯಪ್– 9513322931

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT