ಮಂಡ್ಯ: ‘ಮಂಡ್ಯ ಜಿಲ್ಲೆಯ ಜನರ ಋಣ ನನ್ನ ಮೇಲಿದೆ, ಜಿಲ್ಲೆಯ ಉದ್ಧಾರಕ್ಕೆ ನಾನು ಬದ್ಧ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದಾಗ ಕಿವಿಗಡಚಿಕ್ಕುವ ಶಿಳ್ಳೆ, ಚಪ್ಪಾಳೆ ಬಂದವು. ರೈತರ ಸಾಲ ಮನ್ನಾ ಮಾಡಲು ತಾನು ಹುಡುಕಿದ ಮಾರ್ಗೋಪಾಯಗಳ ಬಗ್ಗೆ ಹೇಳಿದರು. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಕೆ, ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್ ಅಭಿವೃದ್ಧಿ, ಮೈಷುಗರ್ ಕಾರ್ಖಾನೆಗೆ ಮರುಜೀವ, ರೈತರ ಆತ್ಮಹತ್ಯೆ ತಡೆಗೆ ಹೊಸ ಕಾರ್ಯಕ್ರಮ, ನೀರಾವರಿ ಯೋಜನೆಗಳು... ಪಟ್ಟಿ ನೀಡುತ್ತಾ ಹೋದರು. ಮಂಡ್ಯ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳುವಾಗ ‘ಇವರು ಮಂಡ್ಯಕ್ಕೆ ಮಾತ್ರ ಮುಖ್ಯಮಂತ್ರಿಯೇ’ ಎಂಬ ಪ್ರಶ್ನೆ ಮೂಡಿತು.