ಸೋಮವಾರ, ಜೂನ್ 1, 2020
27 °C

25 ವರ್ಷಗಳ ಹಿಂದೆ | ಶನಿವಾರ, 1–4–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುಗಾದಿ ಸಂಭ್ರಮ; ಕಲಾಪ ಸುಗಮ
ಬೆಂಗಳೂರು, ಮಾರ್ಚಿ 31–
ಮರಳಿ ಬಂದ ಯುಗಾದಿ ಆಚರಿಸಲು ಊರುಗಳಿಗೆ ತೆರಳಲು ತುದಿಗಾಲ ಮೇಲೆ ನಿಂತಿದ್ದ ಸದಸ್ಯರು ಇಂದು, ವಾರಪೂರ್ತಿ ನಡೆದ ಬಿಸಿ ವಾಗ್ವಾದ, ಕಹಿ ಅನುಭವಗಳನ್ನು ಮರೆತು ಉಭಯ ಸದನಗಳಲ್ಲೂ ಸುಗಮವಾಗಿ ಕಲಾಪ ಮುಗಿಸಿದರು.

ಇಷ್ಟರ ಮಧ್ಯೆಯೂ, ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಉಚಿತ ವಿದ್ಯುತ್‌ ಪೂರೈಸಬೇಕೆಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಸದಸ್ಯರು, ಬಜೆಟ್‌ ಶ್ರೀಮಂತರ ಪರ ಎಂದು ವಿರೋಧಿಸಿ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ದೊಡ್ಡವರ ಮಕ್ಕಳು
ನವದೆಹಲಿ, ಮಾರ್ಚಿ 31 (ಪಿಟಿಐ)
– ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರ ಪತ್ನಿ ಹಿಲರಿ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳತ್ತಲೇ ಗಮನಹರಿಸಿರುವುದನ್ನು ಕಂಡು ಬೇಸತ್ತ ಅವರ ಪುತ್ರಿ ಚೆಲ್ಸಿಯಾ ಇಂದು ರಾಷ್ಟ್ರಪತಿ ಭವನದಲ್ಲಿ ಸಂತೋಷವಾಗಿ ಕಳೆದಳು.

ಸುಮಾರು ಮೂರು ತಾಸು ರಾಷ್ಟ್ರಪತಿ ಭವನದಲ್ಲಿದ್ದ ಆಕೆ, ರಾಷ್ಟ್ರಪತಿ ಡಾ. ಶಂಕರ್‌ ದಯಾಳ್‌ ಶರ್ಮಾ ಅವರ ಮೊಮ್ಮಕ್ಕಳಾದ ಆವಂತಿಕಾ, ಶ್ರೇಯಾ, ತನ್ಯಾ ಹಾಗೂ ಸೌಮ್ಯ ಅವರೊಂದಿಗೆ ಆಟವಾಡಿದಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.