ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಭಾನುವಾರ 7–5–1995

Last Updated 6 ಮೇ 2020, 20:14 IST
ಅಕ್ಷರ ಗಾತ್ರ

ಖಾಸಗಿ ನೌಕರರಿಗೆ ಕೇಂದ್ರ ಸಿಬ್ಬಂದಿ ಮಾದರಿ ಪಿಂಚಣಿ

ಹೈದರಾಬಾದ್‌, ಮೇ 6 (ಪಿಟಿಐ)– ನೌಕರರ ಭವಿಷ್ಯ ನಿಧಿಗೆ ವಂತಿಗೆ ನೀಡುತ್ತಿರುವ ಖಾಸಗಿ ಕ್ಷೇತ್ರದ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿಯೇ ನಿವೃತ್ತಿ ವೇತನ ನೀಡುವ ಪಿಂಚಣಿ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಈಗ ಆಖೈರುಗೊಳಿಸಿದೆ ಎಂದು ಕಾರ್ಮಿಕ ಸಚಿವ ಪಿ.ಎ. ಸಂಗ್ಮಾ ಅವರು ಇಂದು ಇಲ್ಲಿ ಪ್ರಕಟಿಸಿದರು.

ಬೀಡಿ ಕಾರ್ಮಿಕರ ವಸತಿಗೆ ಸಂಬಂಧಿಸಿದಂತೆ ಏರ್ಪಟ್ಟಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹೊಸ ಯೋಜನೆಯ ಪ್ರಯೋಜನ 1.8 ಕೋಟಿ ನೌಕರರಿಗೆ ಆಗಲಿದೆ. ಇವರಲ್ಲಿ 12 ಲಕ್ಷ ಬೀಡಿ ಕಾರ್ಮಿಕರೂ ಸೇರಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಗರಕ್ಕೆ ಕ್ಷಿಪ್ರ ಸಾರಿಗೆ ಯೋಜನೆ ಆರಂಭ

ಬೆಂಗಳೂರು, ಮೇ 6– ವರ್ತುಲ ರಸ್ತೆ ನಿರ್ಮಾಣ, ಸಾಮೂಹಿಕ ಕ್ಷಿಪ್ರ ಸಾರಿಗೆ ಯೋಜನೆ ಮತ್ತು ಪ್ರಮುಖ ರಸ್ತೆಗಳ ವಿಸ್ತರಣಾ ಕಾರ್ಯಕ್ಕೆ ಪೂರಕವಾಗಿ ರಕ್ಷಣಾ ಮತ್ತು ರೈಲ್ವೆ ಸಚಿವಾಲಯದ ಜತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಬೆಂಗಳೂರು ನಗರದ ವಾಹನ ಸಂಚಾರ ಸಮಸ್ಯೆಯ ಪರಿಹಾರಕ್ಕೆ ಮೂರು ನಿರ್ದಿಷ್ಟ ಪ್ರಸ್ತಾವಗಳನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT