ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ 30–09–1994

.
Last Updated 29 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ದೇಶದಾದ್ಯಂತ ಹಣಕಾಸು ಸಂಸ್ಥೆ ಕೈಗಾರಿಕೆ ಚಟುವಟಿಕೆ ಸ್ತಬ್ಧ

ನವದೆಹಲಿ, ಸೆ. 29 (ಪಿಟಿಐ): ಸರ್ಕಾರದ ಆರ್ಥಿಕ ನೀತಿ, ಗ್ಯಾಟ್‌ ಒಪ್ಪಂದ ಹಾಗೂ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ವಿರೋಧಿಸಿ ವಿವಿಧ ಸಂಘಟನೆಗಳ ರಾಷ್ಟ್ರೀಯ ವೇದಿಕೆ ಇಂದು ನೀಡಿದ ‘ಭಾರತ್‌ ಬಂದ್‌’ ಕರೆಗೆ ದೇಶದಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬ್ಯಾಂಕ್‌, ಕೈಗಾರಿಕೆ ಹಾಗೂ ಗಣಿ ಕ್ಷೇತ್ರಗಳ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ರೈಲ್ವೆ ಹಾಗೂ ವಿಮಾನ ಸಂಚಾರಕ್ಕೆ ಭಾಗಶಃ ಧಕ್ಕೆಯುಂಟಾಯಿತು.

ಪಶ್ಚಿಮ ಬಂಗಾಳ, ಕೇರಳ, ತ್ರಿಪುರ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಭಾರತದ ಸರಕಿಗೆ ಯುಎಇ ನಿಷೇಧ

ದುಬೈ, ಸೆ. 29 (ರಾಯಿಟರ್‌, ಪಿಟಿಐ, ಯುಎನ್‌ಐ, ಡಿಪಿಎ, ಎಪಿ): ಭಾರತದಲ್ಲಿ ಸಂಭವಿಸಿರುವ ಪ್ಲೇಗ್‌ ಹಿನ್ನೆಲೆಯಲ್ಲಿ, ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿರುವ ಅರಬ್‌ ಎಮಿರೇಟ್ಸ್‌ (ಯುಎಇ) ಎರಡೂ ರಾಷ್ಟ್ರಗಳ ನಡುವಿನ ವಿಮಾನ ಹಾರಾಟವನ್ನು ಮಾತ್ರವಲ್ಲದೆ, ಎಲ್ಲ ಸರಕು ಸಾಗಣೆಯನ್ನು ನಿಲ್ಲಿಸಿದೆ.

ರಾಕೆಟ್‌ ದಾಳಿ: ಫರೂಕ್‌ ಪಾರು

ಶ್ರೀನಗರ, ಸೆ. 29 (ಯುಎನ್‌ಐ): ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫರೂಕ್‌ ಅಬ್ದುಲ್ಲಾ ಅವರ ನಿವಾಸದ ಮೇಲೆ ಕಾಶ್ಮೀರಿ ಉಗ್ರಗಾಮಿಗಳು ರಾಕೆಟ್‌ ಹಾರಿಸಿದ್ದು, ಅಬ್ದುಲ್ಲಾ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT