ಬುಧವಾರ, 9–2–1994

7

ಬುಧವಾರ, 9–2–1994

Published:
Updated:

ಕಪಿಲ್ ಈಗ ವಿಕೆಟ್‌ನ ಎವರೆಸ್ಟ್

ಅಹ್ಮದಾಬಾದ್, ಫೆ. 8– ಕಪಿಲ್‌ದೇವ್ ಇಂದು ವಿಶ್ವ ವಿಕೆಟ್ ದೊರೆ. ಮಂಗಳವಾರ ಬೆಳಿಗ್ಗೆ ಸರಿಯಾಗಿ 10.40ಕ್ಕೆ ಕಿರೀಟಧಾರಣೆಯಾಯಿತು. ಶ್ರೀಲಂಕಾದ  ತಿಲಕರತ್ನೆ ಅವರ ವಿಕೆಟ್ ಪಡೆಯುವುದರೊಂದಿಗೆ ಕಪಿಲ್ ದೇವ್, ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ನ ಸರ್ ರಿಚರ್ಡ್ ಹ್ಯಾಡ್ಲಿ ಅವರ ಹೆಸರಿನಲ್ಲಿದ್ದ 431 ವಿಕೆಟ್‌ಗಳ ವಿಶ್ವ ದಾಖಲೆಯನ್ನು ಮುರಿದರು. ಆ 432ನೇ ವಿಕೆಟ್‌ ಭಾರತದ ಕ್ರಿಕೆಟ್‌ ಅಷ್ಟೇ ಅಲ್ಲ ವಿಶ್ವ ಕ್ರಿಕೆಟ್‌ ರಂಗದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಸೇರ್ಪಡೆಯಾಯಿತು.

ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಮೊಟೆರಾ ಕ್ರೀಡಾಂಗಣದಲ್ಲಿ ಆರಂಭವಾದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಎಲ್ಲರಿಗೆ ಇದ್ದ ಕುತೂಹಲ ಕಪಿಲ್‌ ದೇವ್ ಎಷ್ಟೊ‌ತ್ತಿಗೆ ಆ ಅಮೂಲ್ಯ ವಿಕೆಟ್ ಪಡೆಯುವರು ಎಂಬುದು.

ಸ್ವಾಮೀಜಿ ಸ್ವರ್ಗಸ್ಥ

ಬೆಂಗಳೂರು, ಫೆ. 8– ಶಿವಮೊಗ್ಗ ಬಳಿಯಿರುವ ಕೂಡಲಿ ಶೃಂಗೇರಿ ಮಠದ ಹಿರಿಯ ಜಗದ್ಗುರುಗಳಾದ ಶ್ರೀ ವಿದ್ಯಾಭಿನವ ನರಸಿಂಹ ಭಾರತೀ ಮಹಾಸ್ವಾಮಿಗಳು ಇಂದು ಮಧ್ಯಾಹ್ನ ಕೂಡಲಿಯ ಮಠದಲ್ಲಿ ಸ್ವರ್ಗಸ್ಥರಾದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !