ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 28–1–1969

ಚವಾಣ್ ವಿರುದ್ಧ ಶಿವಸೇನೆ ಮತ ಪ್ರದರ್ಶನ
Last Updated 27 ಜನವರಿ 2019, 19:48 IST
ಅಕ್ಷರ ಗಾತ್ರ

ಚವಾಣ್ ವಿರುದ್ಧ ಶಿವಸೇನೆ ಮತ ಪ್ರದರ್ಶನ

ಮುಂಬಯಿ, ಜ. 27– ಮೈಸೂರಿನಲ್ಲಿರುವ ಮರಾಠಿ ಭಾಷಾ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸುವಂತೆ ಒತ್ತಾಯ ಮಾಡಲು ಇಂದು ಮತ್ತೆ ಚಳವಳಿ ಪ್ರಾರಂಭಿಸಿದ ಶಿವಸೇನೆಯು ನವದೆಹಲಿಯಿಂದ ಇಲ್ಲಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಶ್ರೀ ಚವಾಣರ ಎದುರು ಕಪ್ಪು ಧ್ವಜ ಪ್ರದರ್ಶನ ಮಾಡಿತು.

**

ರಾಜ್ಯದ ಲಾಟರಿ ಆರಂಭಕ್ಕೆ ಕೇಂದ್ರದ ಅನುಮತಿ

ಬೆಂಗಳೂರು, ಜ. 27– ರಾಜ್ಯದಲ್ಲಿ ಲಾಟರಿ ಪದ್ಧತಿಯನ್ನು ಆರಂಭಿಸುವ ಸಂಬಂಧದಲ್ಲಿ ಯೋಜನೆ ಒಂದು ಸಿದ್ಧವಾಗುತ್ತಿದೆ ಎಂದು ಪಾರ್ಲಿಮೆಂಟರಿ ವಿಚಾರಗಳ ಸಚಿವ ಶ್ರೀ ಕೆ. ಪುಟ್ಟಸ್ವಾಮಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಲಾಟರಿ ಪ‍ದ್ಧತಿಯನ್ನು ಆರಂಭಿಸಲು ಕೇಂದ್ರ ಸರಕಾರದ ಅನುಮತಿಯನ್ನು ಪಡೆಯಲಾಗಿದೆ ಎಂದು ಸಚಿವ ಶ್ರೀ ಪುಟ್ಟಸ್ವಾಮಿ ಅವರು ತಿಳಿಸಿದರು.

**

ಪ್ರಧಾನಮಂತ್ರಿಗೆ 30 ಲಕ್ಷ ರೂ. ವೆಚ್ಚದ ಗೃಹ: ನಾಳೆ ಸಂಪುಟದ ಚರ್ಚೆ

ನವದೆಹಲಿ, ಜ. 27– ಪ್ರಧಾನಮಂತ್ರಿ ಇಂದಿರಾಗಾಂಧಿ ಅವರಿಗೆ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಅಧಿಕೃತ ನಿವಾಸವೊಂದನ್ನು ನಿರ್ಮಿಸುವ ಸಲಹೆ ಕುರಿತು ಬುಧವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ.

ಸಫ್ತಾರ್‌ಗಂಜ್‌ನಲ್ಲಿರುವ ಪ್ರಸಕ್ತ ನಿವಾಸವು ರಕ್ಷಣಾ ವ್ಯವಸ್ಥೆಗಳ ಹಿತದೃಷ್ಟಿಯಿಂದ ತೃಪ್ತಿಕರವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT