ಇಂಗ್ಲೆಂಡ್‌ನ ‘ಕ್ಯಾಂಟಬರಿ ಕ್ರೈಸ್ಟ್ ವಿಶ್ವವಿದ್ಯಾಲಯ’ ಇಂಗ್ಲಿಷ್ ಸಾಹಿತ್ಯದ ಪದವಿ ತರಗತಿಗಳನ್ನು ನಿಲ್ಲಿಸಿದೆ. ಇಂಗ್ಲಿಷ್ ಸಾಹಿತ್ಯದ ಅಧ್ಯಯನಕ್ಕೆ ತವರು ನೆಲದ ವಿಶ್ವವಿದ್ಯಾಲಯದಲ್ಲಿಯೇ ಆಸ್ಪದ ಇಲ್ಲದಾಗಿರುವುದು, ವರ್ತಮಾನದಲ್ಲಿ ಸಾಹಿತ್ಯದ ಅಧ್ಯಯನಕ್ಕೆ ಇರುವ ಸ್ಥಿತಿಗತಿಯ ಸಂಕೇತದಂತಿದೆ. ಇಂಗ್ಲಿಷ್ ಸಾಹಿತ್ಯದ ಸ್ಥಿತಿಯೇ ಹೀಗಿರುವಾಗ, ಕನ್ನಡ ಸಾಹಿತ್ಯದ ಗತಿಯೇನು?