‘ಪ್ರೇಮಿಗಳ ದಿನ’ಕ್ಕೂ ಮುನ್ನಾ ದಿನವಾದ ಶುಕ್ರವಾರ (ಫೆ. 13) ಅಪಾಯಕಾರಿಯಾದ ದಿನ ಎನ್ನುವ ಸಂದೇಶ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿತ್ತು.
ಇಂದು (ಫೆ.17) ಸಂಭವಿಸುವ ಕಂಕಣ ಸೂರ್ಯಗ್ರಹಣ ಅಪಾಯಕಾರಿ ಎಂಬ ಮಾಹಿತಿ ಈಗ ರೆಕ್ಕೆಪುಕ್ಕ ಪಡೆದುಕೊಂಡಿದೆ. ಅನೇಕ ಜನರು ನಂಬುವ ಅಥವಾ ಗಾಬರಿಗೊಳಗಾಗುವ ಇಂಥ ಸುದ್ದಿಗಳಿಗೆ ಯಾವ ವೈಜ್ಞಾನಿಕ ಪುರಾವೆಗಳೂ ಇರುವುದಿಲ್ಲ. ಆದರೆ, ಅವೈಜ್ಞಾನಿಕ ಮಾಹಿತಿಗಳನ್ನು ನಂಬುವವರಿಗೆ ಕೊರತೆಯೇನೂ ಇಲ್ಲ. ಪ್ರಶ್ನೆ ಮಾಡಿ ಸತ್ಯ ಅರಿಯಿರಿ ಎನ್ನುವ ವಿಜ್ಞಾನದ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಕಡಿಮೆ.

ವಿಜ್ಞಾನ ಎನ್ನುವುದು ಪ್ರಯೋಗ, ಪುರಾವೆ ಮತ್ತು ತರ್ಕದ ಭದ್ರ ಬುನಾದಿಯ ಮೇಲೆ ನಿಂತಿರುವ ಸತ್ಯಸೌಧ. ಆದರೆ, ಇಂದು ಸಾಮಾಜಿಕ ಜಾಲತಾಣ ಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ, ವಿಶ್ವವಿದ್ಯಾಲಯ ಗಳಿಂದ ಹಿಡಿದು ಕೆಲವು ಸಾರ್ವಜನಿಕ ವೇದಿಕೆಗಳ ವರೆಗೆ ಹರಡುತ್ತಿರುವ ‘ನಕಲಿ ವಿಜ್ಞಾನ’ವು ನೈಜ ವಿಜ್ಞಾನ ಸೌಧದ ಬುಡವನ್ನೇ ಅಲ್ಲಾಡಿಸುತ್ತಿದೆ. ಈ ನಕಲಿ ಹಾವಳಿ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ.

ನಕಲಿ ವಿಜ್ಞಾನದ ಹೇಳಿಕೆಗಳಿಗೆ ಪುರಾವೆಗಳ ಬೆಂಬಲ ಇರುವುದಿಲ್ಲ. ಇವು ವೈಯಕ್ತಿಕ ಅನುಭವ ಅಥವಾ ಕಲ್ಪಿತ ಕಥೆಗಳ ಮೇಲೆ ನಿಂತಿರುತ್ತವೆ. ಜನರ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಭಯ ಅಥವಾ ಭಾವೋದ್ರೇಕದ ಮೂಲಕ ಜನರನ್ನು ಸೆಳೆಯುತ್ತವೆ. ಇಲ್ಲಿ ಪ್ರಶ್ನೆಗಳನ್ನು ಹತ್ತಿಕ್ಕಲಾಗುತ್ತದೆ. ನೈಜ ವಿಜ್ಞಾನ ಪ್ರಶ್ನೆಗಳನ್ನೆದುರಿಸುತ್ತದೆ. ಸಮರ್ಪಕ ಉತ್ತರ ನೀಡುತ್ತದೆ. ಪ್ರಕ್ರಿಯೆಯಲ್ಲಿ ತಪ್ಪುಗಳಾದರೆ, ಪ್ರಯೋಗಗಳ ಮೂಲಕ ತನ್ನನ್ನು ತಾನು ತಿದ್ದಿಕೊಳ್ಳುತ್ತದೆ. ಜನರಿಗೆ ಸತ್ಯದರ್ಶನ ಮಾಡಿಸಿ ಆತ್ಮವಿಶ್ವಾಸ ತುಂಬುತ್ತದೆ. ನಕಲಿ ವಿಜ್ಞಾನದ ಭ್ರಾಂತಿಗಳು ಹೇಗೆಲ್ಲ ಇವೆ ಎಂಬುದನ್ನು ಕೆಳಗಿನ ಉದಾಹರಣೆಗಳನ್ನು ಗಮನಿಸಿದರೆ ತಿಳಿಯುತ್ತದೆ.

ಆ್ಯಪಲ್ ಕಂಪನಿಯ ಮೂಲಕ ಮೊಬೈಲ್ ಫೋನ್ ಉದ್ಯಮದಲ್ಲಿ ಕ್ರಾಂತಿ ತಂದ ಸ್ಟೀವ್ ಜಾಬ್ಸ್
ಅವರಿಗೆ ಯಕೃತ್ತಿನ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ವೈದ್ಯರ ಸಲಹೆಯಂತೆ ಚಿಕಿತ್ಸೆಗೊಳಗಾಗಲಿಲ್ಲ. ಹಣ್ಣಿನ ರಸ, ಪಥ್ಯಾಹಾರ ಮತ್ತು ಅಸಾಂಪ್ರದಾಯಿಕ ವೈದ್ಯ ಪದ್ಧತಿಯಿಂದ ಗುಣಪಡಿಸಿಕೊಳ್ಳಲು ಪ್ರಯತ್ನಿಸಿ, ಕೊನೆಗೆ ಸಾವಿಗೆ ಬಲಿಯಾದರು. ವಿಶ್ವದ ಪ್ರಭಾವಿ ಉದ್ಯಮಿ ಹಾಗೂ ತಂತ್ರಜ್ಞಾನಿಯೊಬ್ಬ ನಕಲಿ ವಿಜ್ಞಾನಕ್ಕೆ ಬಲಿಯಾದ ದೊಡ್ಡ ದುರಂತವಿದು.

ಕಾಂತೀಯ ಚಿಕಿತ್ಸೆಯ ಹೆಸರಿನಲ್ಲಿ ಆಯಸ್ಕಾಂತ ದೇಹಕ್ಕೆ ಅಂಟಿಸಿಕೊಳ್ಳುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಕ್ಯಾನ್ಸರ್ ಗುಣವಾಗುತ್ತದೆ ಎಂಬ ಸುಳ್ಳನ್ನು ಹರಡಲಾಗುತ್ತಿದೆ. ಇದು ವಿಜ್ಞಾನ ಎಂದು ಬಿಂಬಿಸಲು ವಿದೇಶಗಳಲ್ಲೂ ಇದರ ಬಳಕೆಯಾಗುತ್ತದೆ ಎಂದು ಹೇಳುವವರಿದ್ದಾರೆ. ರಕ್ತದಲ್ಲಿರುವ ಕಬ್ಬಿಣದ ಅಂಶಕ್ಕೆ ದೇಹದ ಹೊರಗಿನ ಕಾಂತತ್ವ ಶಕ್ತಿಗೆ ಪ್ರತಿಕ್ರಿಯಿಸುವ ಗುಣವಿಲ್ಲ ಎಂಬುದನ್ನು ಜನರಿಗೆ ಹೇಳುವವರಾರು?

ನಾವು ಬಳಸುವ ನೀರಿಗೆ ನೆನಪಿಟ್ಟುಕೊಳ್ಳುವ ಶಕ್ತಿ ಇದೆ, ನೀರು ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಪಡೆದಿದೆ ಮತ್ತು ಅದು ನಾವು ಹೇಳಿದ ಮಾತುಗಳನ್ನು ನೆನಪಿಟ್ಟುಕೊಳ್ಳುತ್ತದೆ ಎನ್ನುವುದು ಯಾವುದೇ ಪ್ರಯೋಗದಿಂದ ಸಾಬೀತಾಗಿಲ್ಲ. ಆದರೂ, ಇದನ್ನು ಪ್ರಚುರಪಡಿಸುವಲ್ಲಿ ನಕಲಿ ವಿಜ್ಞಾನಿಗಳು ಮತ್ತದರ ಏಜೆಂಟರುಗಳು ಸಿಗುವ ಯಾವ ಅವಕಾಶವನ್ನೂ ಬಿಡುತ್ತಿಲ್ಲ.

ಗ್ರಹಗಳ ಚಲನೆ ಮಾನವನ ಗುಣ ಅಥವಾ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದನ್ನು ಸಾರ್ವಕಾಲಿಕ ಸತ್ಯವೆಂಬಂತೆ ಬಿಂಬಿಸಲಾಗುತ್ತಿದೆ. ಇದು ನಿಜ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಆದರೂ, ಇದನ್ನು ‘ಖಗೋಳ ವಿಜ್ಞಾನ’ದ ಭಾಗವೆಂಬಂತೆ ಬಿಂಬಿಸಿ ಶಾಲೆ–ವಿಶ್ವವಿದ್ಯಾಲಯಗಳಲ್ಲಿ ಕಲಿಸುವ ಏರ್ಪಾಟು ನಡೆಯುತ್ತಿದೆ.

ನಕಲಿ ವಿಜ್ಞಾನದ ಸಿದ್ಧಾಂತ, ಹೇಳಿಕೆ, ನಡವಳಿಕೆಗಳು ಹಲವು ಆತಂಕಕಾರಿ ಘಟನೆಗಳಿಗೆ ಸಾಕ್ಷಿಯಾಗಿವೆ ಮತ್ತು ಪ್ರಾಣಹಾನಿಗೂ ಕಾರಣವಾಗಿವೆ. ಕೋವಿಡ್ ಸಮಯದಲ್ಲಿ, ಗೋಮೂತ್ರ ಕುಡಿದರೆ ಅಥವಾ ಸೆಗಣಿ ಬಳಿದುಕೊಂಡರೆ ಕೊರೊನಾ ವೈರಸ್ ಸಾಯುತ್ತದೆ ಎಂಬ ಪ್ರಚಾರ ನಡೆಯಿತು. ಅದನ್ನು ನಂಬಿ ಗೋಮೂತ್ರಗೋಷ್ಠಿಗಳು ನಡೆದವು. ಸೆಗಣಿ ಲೇಪನವೂ ನಡೆಯಿತು. ಕೊರೊನಾ ಬಾಧಿಸಿದಾಗ ಆಸ್ಪತ್ರೆಗೆ ದಾಖಲಾಗುವ ಬದಲು ಮನೆಯಲ್ಲೇ ಉಳಿದು ಜೀವ ಕಳೆದುಕೊಂಡವರೂ ಇದ್ದಾರೆ. ಲಸಿಕೆ ಹಾಕಿಸಿಕೊಂಡರೆ ನಪುಂಸಕತೆ ಉಂಟಾಗುತ್ತದೆ, ವಿಟಮಿನ್ ‘ಡಿ’ ಸೇವನೆಯಿಂದ ಕೊರೊನಾ ತಡೆಯಬಹುದು, ಜೇನುತುಪ್ಪದ ಸೇವನೆಯಿಂದ ವೈರಸ್ ಉಪಟಳ ಕಡಿಮೆಯಾಗುತ್ತದೆ, ಆಹಾರ ಪಥ್ಯದಿಂದ ವೈರಸ್ನ ಸೋಂಕು ತಡೆಯಬಹುದು, ಎಂಬೆಲ್ಲ ತಪ್ಪು ಹೇಳಿಕೆಗಳು ಚಾಲ್ಲಿಯಲ್ಲಿದ್ದವು.

ವೈರಸ್ ಅನ್ನು ಮನೆಯ ಒಳಗೆ ಬರದಂತೆ ತಡೆಯಲು ತಟ್ಟೆ–ಜಾಗಟೆ ಬಡಿದದ್ದೂ ಆಯಿತು. ಅದನ್ನು ಕಂಡರೂ ಕಿವುಡು ಕುರುಡರಂತಿದ್ದ ದೇಶದ ವಿಜ್ಞಾನಿಗಳು ‘ಇದು ಅವೈಜ್ಞಾನಿಕ’ ಎಂದು ಹೇಳುವ ಹೊಣೆಗಾರಿಕೆ ಪ್ರದರ್ಶಿಸಲಿಲ್ಲ. ಇವರ ಮೌನ ನಕಲಿ ವಿಜ್ಞಾನ ಪ್ರಚಾರಕರಿಗೆ ಮತ್ತಷ್ಟು ಧೈರ್ಯ ನೀಡಿತು.

1998ರಲ್ಲಿ ಆಂಡ್ರ್ಯೂ ವೇಕ್ಫೀಲ್ಡ್ ಎಂಬಾತ ‘ದಿ ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಎಂಎಂಆರ್ ಲಸಿಕೆಗೂ ಆಟಿಸಂ ರೋಗಕ್ಕೂ ಸಂಬಂಧವಿದೆ ಎಂದು ಲೇಖನ ಪ್ರಕಟಿಸಿದ್ದ. ಆ ಸಂಶೋಧನೆಯು ಸುಳ್ಳು ದಾಖಲೆಗಳ ಮೇಲೆ ನಿಂತಿದೆ ಎಂದು ನಂತರ ಸಾಬೀತಾಯಿತು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಮತ್ತು ಜಾಗತಿಕ ಆರೋಗ್ಯ ಸಂಸ್ಥೆಗಳು ಲಕ್ಷಾಂತರ ಮಕ್ಕಳನ್ನು ಒಳಗೊಂಡ ಹತ್ತಾರು ಅಧ್ಯಯನಗಳನ್ನು ನಡೆಸಿದವು. ಈ ಅಧ್ಯಯನಗಳಲ್ಲಿ ಲಸಿಕೆ ಮತ್ತು ಆಟಿಸಂ ನಡುವೆ ಯಾವುದೇ ಸಂಬಂಧ ಕಂಡುಬರಲಿಲ್ಲ. ಆಂಡ್ರ್ಯೂನ ವೈದ್ಯಕೀಯ ಪರವಾನಗಿಯನ್ನು ರದ್ದುಗೊಳಿಸಲಾಯಿತು ಮತ್ತು ಅವನ ಲೇಖನವನ್ನು ಹಿಂಪಡೆಯಲಾಯಿತು. ಸುಳ್ಳು ಎಂದು ಸಾಬೀತಾದರೂ, ಅಂದು ಆ ಮಾತನ್ನು ನಂಬಿ ಲಸಿಕೆಯಿಂದ ದೂರ ಉಳಿದ ಅನೇಕರು ಪೋಲಿಯೊದಂತಹ ರೋಗಗಳನ್ನು ಆಹ್ವಾನಿಸುವಂತಾಗಿದೆ.

ಕ್ವಾಂಟಂ ಹೀಲಿಂಗ್ ಹೆಸರಿನಲ್ಲಿಯೂ ಜನರನ್ನು ದಾರಿತಪ್ಪಿಸಲಾಗುತ್ತಿದೆ. ಇದರ ಪ್ರತಿಪಾದಕರು ‘ಪ್ರತಿ ಮನುಷ್ಯನ ಮನಸ್ಸಿಗೆ ತನ್ನದೇ ಆದ ವಿಶೇಷ ಶಕ್ತಿ ಇರುತ್ತದೆ. ನಮ್ಮ ಆಲೋಚನೆಗಳನ್ನು ಬದಲಾಯಿಸುವ ಮೂಲಕ ದೇಹದ ಅಣುಗಳ ಮಟ್ಟದಲ್ಲಿ ಬದಲಾವಣೆ ತರಬಹುದು ಮತ್ತು ಕ್ಯಾನ್ಸರ್ನಂತಹ ರೋಗಗಳನ್ನು ಗುಣಪಡಿಸಬಹುದು’ ಎನ್ನುತ್ತಾರೆ. ಭೌತವಿಜ್ಞಾನದ ಸಂಕೀರ್ಣ ವಿಷಯವಾದ ‘ಕ್ವಾಂಟಂ ಫಿಸಿಕ್ಸ್’ನ ತತ್ತ್ವಗಳನ್ನಾಧರಿಸಿ, ಮನಸ್ಸಿನ ಶಕ್ತಿಯಿಂದಲೇ ಗಂಭೀರ ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ನಂಬಿಸಿ ಜನರಿಂದ ಹಣವನ್ನು ಲೂಟಿ ಮಾಡುವ ದೊಡ್ಡ ಜಾಲವೇ ಸೃಷ್ಟಿಯಾಗಿದೆ.

ಮಾರುಕಟ್ಟೆಯಲ್ಲಿ ಸಿಗುವ ‘ಡಿಟಾಕ್ಸ್ ಜ್ಯೂಸ್’ ಕುಡಿಯುವುದರಿಂದ ಅಥವಾ ಪಾದಕ್ಕೆ ಹಚ್ಚುವ
ಪ್ಯಾಚ್ಗಳಿಂದ ದೇಹದ ‘ವಿಷಕಾರಿ ಟಾಕ್ಸಿನ್’ಗಳು ಹೊರಬರುತ್ತವೆ ಎಂದು ಹೇಳುವ ಅವೈಜ್ಞಾನಿಕ ಚಿಕಿತ್ಸೆ ಜೋರಾಗಿ ನಡೆಯುತ್ತಿದೆ. ಬ್ರಿಟಿಷ್ ಡಯಟಿಕ್ ಅಸೋಸಿಯೇಷನ್ ಪ್ರಕಾರ, ‘ಡಿಟಾಕ್ಸ್’ ಎಂಬುದು ವ್ಯಾಪಾರಿ ಪದವೇ ಹೊರತು ವೈಜ್ಞಾನಿಕವಲ್ಲ. ಮಾನವನ ದೇಹದಲ್ಲಿ ಯಕೃತ್ತು ಮತ್ತು ಮೂತ್ರ ಪಿಂಡಗಳು ನೈಸರ್ಗಿಕವಾಗಿಯೇ ವಿಷಕಾರಿ ಅಂಶಗಳನ್ನು ಹೊರಹಾಕುವ ಕೆಲಸವನ್ನು ದಿನದ 24 ಗಂಟೆಯೂ ಮಾಡುತ್ತವೆ. ಯಾವುದೇ ಜ್ಯೂಸ್ ಅಥವಾ ಪ್ಯಾಚ್ಗಳು ಈ ಪ್ರಕ್ರಿಯೆಯನ್ನು ಹೆಚ್ಚಿಸುವುದಿಲ್ಲ ಎಂದು ಸಂಶೋಧನೆಗಳು ಸ್ಪಷ್ಟಪಡಿಸಿವೆ. ಆದರೂ, ಜನ ಸುಳ್ಳಿನ ಮಾರುಕಟ್ಟೆಯ ಸರಕುಗಳಾಗುತ್ತಿದ್ದಾರೆ.

ವಿಜ್ಞಾನದ ಹೆಸರಿನಲ್ಲಿ ಹಬ್ಬುತ್ತಿರುವ ಇನ್ನೊಂದು ಪ್ರಮುಖ ಅಪಸವ್ಯ ರಕ್ತದ ಗುಂಪಿನ ಆಧಾರಿತ ಆಹಾರ ಸೇವನೆಯ ಕುರಿತಾದದ್ದು. ಇದು, ನೀವು ನಿಮ್ಮ ರಕ್ತದ ಗುಂಪಿಗೆ ತಕ್ಕಂತೆ ಆಹಾರ ಸೇವಿಸಿದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎನ್ನುತ್ತದೆ. ‘ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್’ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ 1,455 ಜನರ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ರಕ್ತದ ಗುಂಪಿಗೂ ಆಹಾರದ ಜೀರ್ಣಕ್ರಿಯೆಗೂ ಸಂಬಂಧವಿಲ್ಲ. ಆರೋಗ್ಯಕರ ಆಹಾರವನ್ನು ಯಾರೇ ಸೇವಿಸಿದರೂ ಅದು ಉತ್ತಮ ಪರಿಣಾಮ ಬೀರುತ್ತದೆ, ಅದಕ್ಕೂ ರಕ್ತದ ಗುಂಪಿಗೂ ಸಂಬಂಧವಿಲ್ಲ. ನಕಲಿ ವಿಜ್ಞಾನದ ಕ್ರಮ ಚಿಂತನೆಗಳು ಪ್ಲಸೀಬೊ ಪರಿಣಾಮವನ್ನು (ಮಾನಸಿಕ ತೃಪ್ತಿ) ಉಂಟು ಮಾಡುತ್ತವೆಯಷ್ಟೇ ಎಂಬುದೀಗ ಗುಟ್ಟಾಗಿ ಉಳಿದಿಲ್ಲ.

ನಕಲಿ ವಿಜ್ಞಾನದ ಪ್ರಸಾರದ ವಿರುದ್ಧ ಡಾ. ಜಯಂತ್ ನಾರಳೀಕರ್, ನರೇಂದ್ರ ದಾಬೋಲ್ಕರ್, ಬಸವ ಪ್ರೇಮಾನಂದ್, ನರೇಂದ್ರ ನಾಯಕ್, ಸಿರಿಯಾಕ್ ಅಬ್ಬಿ ಫಿಲಿಪ್ಸ್, ಬಾಬು ಕೆ.ವಿ., ಸುಮಿತ್ರೊ ಬ್ಯಾನರ್ಜಿ, ಅತಿಶ್ ದಾಬೋಲ್ಕರ್, ಮುಂತಾದವರು ದೊಡ್ಡ ಹೋರಾಟ ನಡೆಸಿದ್ದಾರೆ. ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ, ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿ, ಫೆಡರೇಷನ್ ಆಫ್ ಇಂಡಿಯನ್ ರ್ಯಾಶನಲಿಸ್ಟ್ ಅಸೋಸಿಯೇಷನ್ಗಳು ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ.

ಯಾವುದೇ ಮಾಹಿತಿಯನ್ನು ನಂಬುವ ಮೊದಲು ಅದಕ್ಕೆ ಮಾನ್ಯತೆ ಪಡೆದ ಪ್ರಯೋಗಾಲಯದ ಪುರಾವೆ
ಇದೆಯೇ? ಅದನ್ನು ಹೇಳುತ್ತಿರುವವರು ಆ ಕ್ಷೇತ್ರದ ತಜ್ಞರೇ? ಇದು ಭಾವನೆಗಳನ್ನು ಕೆರಳಿಸುವ ವಿಷಯವೇ ಅಥವಾ ತರ್ಕಬದ್ಧವಾಗಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಹತ್ತಿಪ್ಪತ್ತು
ಜನರ ಮೇಲೆ ನಡೆದ ಅಧ್ಯಯನ ವಿಜ್ಞಾನವಾಗಲು ಸಾಧ್ಯವಿಲ್ಲ. ಸಾವಿರಾರು ಜನರ ಮೇಲೆ ನಡೆಸಿದ ಪ್ರಯೋಗಗಳೇ ಸತ್ಯಕ್ಕೆ ಹತ್ತಿರವಾಗಿರುತ್ತವೆ. ಅವುಗಳಿಗೆ ಪ್ರಾಮುಖ್ಯತೆ ದೊರಕಬೇಕು. ಸಮಾಜದ ಪ್ರಗತಿಯು ವಿಜ್ಞಾನದ ಸಾರ್ವಕಾಲಿಕ ಸತ್ಯಗಳ ಮೇಲೆ ನಿಂತಿದೆಯೇ ಹೊರತು ವಿಜ್ಞಾನದ ಹೆಸರಿನಲ್ಲಿ ಹರಡುವ ಮೂಢನಂಬಿಕೆಗಳ ಮೇಲಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.