ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Doctor's Day| ಸೂಜಿ ಹೊರತೆಗೆವ ಕ್ಲಿಷ್ಟಕರ ಚಿಕಿತ್ಸೆ ಯಶಸ್ವಿಯಾಗಿತ್ತು...

Published 30 ಜೂನ್ 2023, 23:25 IST
Last Updated 30 ಜೂನ್ 2023, 23:25 IST
ಅಕ್ಷರ ಗಾತ್ರ

– ಡಾ.ಮೊಹಮ್ಮದ್‌ ಅಬ್ದುಲ್ ಬಷೀರ್

ಕೆಲ ತಿಂಗಳ ಹಿಂದೆ ಕಲಬುರಗಿ ಜಿಲ್ಲೆಯ ಮೂರು ವಿವಿಧ ಊರುಗಳಿಂದ ಸೂಜಿ ನುಂಗಿದ ಮೂವರು 16ರಿಂದ 20 ವರ್ಷದೊಳಗಿನ ಯುವತಿಯರು ಆಸ್ಪತ್ರೆಗೆ ಬಂದರು.

ಯಾವುದೋ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಅದು ವಾಸಿಯಾಗದ್ದಕ್ಕೆ ಜುಗುಪ್ಸೆಗೊಂಡು ಹಾಗೂ ಮನೆಯಲ್ಲಿ ಹೆದರಿಸುವುದಕ್ಕೆ ಸುಮಾರು 5 ಸೆಂಟಿ ಮೀಟರ್‌ಗಳಿಗಿಂತ ಉದ್ದದ ಸೂಜಿಯನ್ನು ನುಂಗಿದ್ದರು! ಅಲ್ಲಿ ಇಲ್ಲಿ ತೋರಿಸಿ ನಮ್ಮ ಆಸ್ಪತ್ರೆಗೆ ಬರುವ ವೇಳೆಗಾಗಲೇ ಸೂಜಿ ನುಂಗಿ ಮೂರು ತಿಂಗಳು ಕಳೆದಿತ್ತು. ಹೀಗಾಗಿ, ಹೊಟ್ಟೆ ನೋವು ಅವರನ್ನು ತೀವ್ರವಾಗಿ ಬಾಧಿಸುತ್ತಿತ್ತು. ಇದಕ್ಕೆ ಇದ್ದ ಏಕೈಕ ಪರಿಹಾರವೆಂದರೆ ಲ್ಯಾಕ್ರೊಸ್ಕೊಪಿ ಮೂಲಕ ಸೂಜಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಿ ಹೊಟ್ಟೆಯನ್ನು ಕೊಯ್ದು ಅದನ್ನು ಹೊರತೆಗೆಯುವುದು. ಹೀಗೆ ಮಾಡುವುದರಿಂದ ರೋಗಿಯು ಆಸ್ಪತ್ರೆಯಲ್ಲಿ ಹೆಚ್ಚು ದಿನ ಉಳಿಯಬೇಕಾಗುತ್ತಿತ್ತು. ಜೊತೆಗೆ, ಹೊಟ್ಟೆ ಕೊಯ್ದ ಗಾಯ ಮಾಯಲು ಹೆಚ್ಚು ದಿನ ತೆಗೆದುಕೊಳ್ಳುತ್ತಿತ್ತು.

ಕಡಿಮೆ ಅವಧಿಯಲ್ಲಿ ರೋಗಿಯನ್ನು ಡಿಸ್ಚಾರ್ಜ್ ಮಾಡುವ ಹಾಗೂ ಗಾಯವನ್ನು ಮಾಡದೇ ಸೂಜಿಯನ್ನು ಹೊರತೆಗೆಯುವ ಸವಾಲು ನಮ್ಮ ಎದುರಿಗಿತ್ತು. ಆ ಸಂದರ್ಭದಲ್ಲಿ ಎಂಡೊಸ್ಕೊಪಿ ಜೊತೆಗೆ ಸಿ–ಆರ್ಮ್ ತಂತ್ರಜ್ಞಾನವನ್ನು ಬಳಸಿಕೊಂಡು ಸೂಜಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾದೆವು. ಸೂಜಿ ಹೊಟ್ಟೆಯಿಂದ ಜಾರಿ ಕರುಳಿಗೆ ಹೊಕ್ಕಿತ್ತು. ಅದನ್ನು ಪತ್ತೆ ಹಚ್ಚಿ ಹೊಟ್ಟೆಯನ್ನು ಕೊಯ್ಯುವ ಬದಲು ಮೂರು ರಂಧ್ರಗಳನ್ನು ಹಾಕಿ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಸೂಜಿಯನ್ನು ಹೊರತೆಗೆದೆವು. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಮಾಡಿದ್ದರೆ ಇದಕ್ಕೆ ₹60 ಸಾವಿರದಿಂದ ₹80 ಸಾವಿರ ಬೇಕಾಗುತ್ತಿತ್ತು. ಲ್ಯಾಪ್ರೊಸ್ಕೊಪಿ, ಸಿ–ಆರ್ಮ್ ತಂತ್ರಜ್ಞಾನ ಬಳಸಿದ್ದರಿಂದ ಕೇವಲ ₹25 ಸಾವಿರದಲ್ಲಿ ಮುಗಿಯಿತು. ನಾಲ್ಕು ದಿನಕ್ಕೇ ಆಸ್ಪತ್ರೆಯಿಂದ ಯುವತಿಯರನ್ನು ಡಿಸ್ಚಾರ್ಜ್ ಮಾಡಿದೆವು.

ಲೇಖಕರು: ಕನ್ಸಲ್ಟಂಟ್ ಜನರಲ್ ಅಂಡ್‌ ಲ್ಯಾಕ್ರೊಸ್ಪೊಪಿಕ್ ಸರ್ಜನ್, ಯುನೈಟೆಡ್ ಆಸ್ಪತ್ರೆ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT