‘ಭಾರತದಲ್ಲಿ ಜನಿಸಿದ ನಿವಾಸಿಗಳು, ಆದರೆ, ಮೂಲ ಸ್ಥಳದಲ್ಲಾಗಲಿ ಕೆಲಸದ ಸ್ಥಳದಲ್ಲಾಗಲಿ ಮತದಾನದ ಹಕ್ಕು ಇಲ್ಲದವರು’ ಎನ್ನುವ ಹೊಸ ಸಮುದಾಯ ಸೃಷ್ಟಿಸಲು ‘ಎಸ್ಐಆರ್’ ಹೊರಟಂತಿದೆ. ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಮಾಣದಲ್ಲಿ ಮತದಾರರ ರದ್ದತಿ ದಾಖಲೆಯನ್ನೂ ‘ಎಸ್ಐಆರ್’ ಸೃಷ್ಟಿಸಲಿದೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಎರಡನೇ ಹಂತದ ಭಾಗವಾಗಿ ಮತದಾರರ ಕರಡು ಪಟ್ಟಿಯನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗ ಆರಂಭಿಸಿದೆ. ಈ ಬಾರಿ ಈ ಪ್ರಕ್ರಿಯೆ ಬಿಹಾರಕ್ಕಿಂತಲೂ ಕೆಟ್ಟದಾಗಿದೆ ಮತ್ತು ಮತದಾರರ ಹೆಸರು ಕೈಬಿಡುವಿಕೆ ಇನ್ನೂ ಹೆಚ್ಚಲಿದೆ; ಅದು ಹೆಚ್ಚಿನ ಹಾನಿಯನ್ನೂ ಮಾಡಲಿದೆ ಎಂಬುದು ಸ್ಪಷ್ಟವಾಗಿದೆ. ಐದು ರಾಜ್ಯಗಳ ಅಧಿಕೃತ ದತ್ತಾಂಶ ಮತ್ತು ಉಳಿದ ರಾಜ್ಯಗಳ ಕುರಿತು ಪ್ರಕಟವಾಗಿರುವ ಮಾಧ್ಯಮ ವರದಿಗಳನ್ನು ಒಟ್ಟಾಗಿ ಇರಿಸಿ ನೋಡಿದರೆ, ಮತದಾರರ ಪಟ್ಟಿಯಲ್ಲಿರುವ 11 ಕೋಟಿಯಷ್ಟು ಹೆಸರುಗಳನ್ನು ಕೈಬಿಡುವ ಅಪಾಯ ಎದ್ದು ಕಾಣಿಸುತ್ತಿದೆ. ಅಂತಿಮ ಸಂಖ್ಯೆ ಇದಕ್ಕಿಂತ ಬಹಳ ಕಡಿಮೆ ಇರಬಹುದು. ಆದರೆ, ಇಡೀ ದೇಶದಲ್ಲಿ ಎಸ್ಐಆರ್ ಪೂರ್ಣಗೊಂಡಾಗ ಸುಮಾರು 10 ಕೋಟಿ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು.

ಮಾಹಿತಿಯು ಹರಿದು ಹಂಚಿ ಚೆಲ್ಲಾಪಿಲ್ಲಿಯಾಗಿದೆ ಮತ್ತು ಅದನ್ನು ಮರೆಮಾಚಲಾಗಿದೆ ಎಂಬುದೇ ಈ ವಿಚಾರವು ಚರ್ಚೆಯ ಮುಖ್ಯ ವಿಷಯ ಇನ್ನೂ ಆಗಿಲ್ಲ ಎಂಬುದಕ್ಕೆ ಕಾರಣ. ಬಿಹಾರ ಚುನಾವಣೆಯ ಬಳಿಕ ಎಸ್ಐಆರ್ ರಾಷ್ಟ್ರಮಟ್ಟದ ಮಾಧ್ಯಮಗಳಿಂದ ಮರೆಯಾಯಿತು ಮತ್ತು ಪ್ರಾದೇಶಿಕ ಮಾಧ್ಯಮಕ್ಕೆ ಅಥವಾ ಸ್ಥಳೀಯ ಪುಟಕ್ಕೆ ಸೀಮಿತವಾಯಿತು. ಎಸ್ಐಆರ್ನ ಗಡುವನ್ನು ಪದೇ ಪದೇ ರಾಜ್ಯವಾರು ವಿಸ್ತರಣೆ ಮಾಡಲಾಗಿದೆ ಮತ್ತು ಈ ಕಾರಣದಿಂದಾಗಿ ದತ್ತಾಂಶಗಳು ನಾಲ್ಕು ಕಂತುಗಳಲ್ಲಿ ಬಹಿರಂಗವಾಗಲಿವೆ. ಈ ಮೂಲಕ ಸಮಗ್ರ ಚಿತ್ರಣವನ್ನು ಮರೆ ಮಾಚಲಾಗಿದೆ.

ಡಿಜಿಟಲೀಕರಣಗೊಂಡ ದತ್ತಾಂಶದ ಶೇಕಡಾವಾರು ಪ್ರಮಾಣವನ್ನು ಪ್ರಕಟಿಸುವ ಹೊಸ ಪದ್ಧತಿಯ ಮೂಲಕ ಮಾಹಿತಿಯನ್ನು ಮರೆಮಾಚುವ ಕೆಲಸವನ್ನು ಆಯೋಗವು ಅದ್ಭುತವಾಗಿ ಮಾಡುತ್ತಿದೆ. ಇದರಿಂದಾಗಿ ನಮಗೆ ಬೇಕಾದ ಎರಡು ರೀತಿಯ ಮಾಹಿತಿಯು ಸಿಗದಂತಾಗುತ್ತದೆ. ಅವುಗಳೆಂದರೆ, ಗಣತಿ ನಮೂನೆಯನ್ನು ಭರ್ತಿ ಮಾಡದೆ ಕರಡು ಪಟ್ಟಿಯಿಂದ ಕೈಬಿಡಬಹುದಾದವರ ಸಂಖ್ಯೆ ಮತ್ತು ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಹೊಸ ಪಟ್ಟಿಯಿಂದ ಹೆಸರು ಕೈಬಿಡಬಹುದಾದವರ ಸಂಖ್ಯೆ.

ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ರಾಜಸ್ಥಾನ, ಪಶ್ಚಿಮ ಬಂಗಾಳ, ಗೋವಾ, ಲಕ್ಷದ್ವೀಪ ಮತ್ತು ಪುದುಚೇರಿ) ಮತದಾರರ ಕರಡು ಪಟ್ಟಿ ಪ್ರಕಟಗೊಂಡ ಬಳಿಕ ವಾಸ್ತವ ಚಿತ್ರಣ ಕಾಣಿಸ
ತೊಡಗಿದೆ. ಉಳಿದ ರಾಜ್ಯಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿನ ‘ಮೂಲ ಆಧಾರಿತ’ ಮಾಹಿತಿ ನಮಗೆ ಲಭ್ಯವಿದೆ. ಈ ವರದಿಗಳು ಬಹುತೇಕ ನಿಖರವಾಗಿ ಇದ್ದಂತೆ ಕಾಣಿಸುತ್ತಿದೆ. ಏಕೆಂದರೆ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದ ಕುರಿತು ಬಂದ ಇಂತಹ ವರದಿಗಳ ರೀತಿಯಲ್ಲಿಯೇ ನಂತರ ಪ್ರಕಟವಾದ ಅಧಿಕೃತ ಅಂಕಿಸಂಖ್ಯೆಗಳೂ ಇದ್ದವು. ರಾಜ್ಯ ಚುನಾವಣಾ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಹೇಳಿಕೆಗಳು ಈ ವರದಿಗಳನ್ನು ದೃಢಪಡಿಸಿವೆ. ನಮಗೆ ಸಿಕ್ಕ ಅಧಿಕೃತವಲ್ಲದ ಅಂಕಿಸಂಖ್ಯೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಬಹಿರಂಗವಾಗಿಯೇ ದೃಢಪಡಿಸಿದ್ದಾರೆ.

ಮತದಾರರ ಸಾಮೂಹಿಕ ಕೈಬಿಡುವಿಕೆ ಯಾವ ಪ್ರಮಾಣದಲ್ಲಿ ಇರಬಹುದು ಎಂಬುದನ್ನು ಈ ಅಂಕಿಸಂಖ್ಯೆಗಳಿಂದ ನಾವು ಊಹಿಸಬಹುದು. ಸಣ್ಣ ರಾಜ್ಯ ಗೋವಾ (ಒಂದು ಲಕ್ಷ) ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ (ಒಂದು ಲಕ್ಷ), ಅಂಡಮಾನ್–ನಿಕೋಬಾರ್ (0.6 ಲಕ್ಷ) ಅನ್ನು ಸೇರಿಸಿಕೊಂಡು ನೋಡಿದರೆ, ಗಣತಿ ನಮೂನೆ ಭರ್ತಿ ಮಾಡದವರ ಸಂಖ್ಯೆಯು 6.3 ಕೋಟಿಯಷ್ಟಿದೆ. ಇವರೆಲ್ಲರೂ ಕರಡು ಪಟ್ಟಿಯಿಂದ ಹೊರಬೀಳಬಹುದು. ಮೂಲ ಗಡುವಿನ ಒಳಗೆ ಗಣತಿ ನಮೂನೆ ಭರ್ತಿ ಮಾಡದವರು ಅತಿಹೆಚ್ಚು ಇರುವುದು ಉತ್ತರ ಪ್ರದೇಶದಲ್ಲಿ (2.93 ಕೋಟಿ); ನಂತರದ ಸ್ಥಾನಗಳಲ್ಲಿ ತಮಿಳುನಾಡು (80 ಲಕ್ಷ), ಗುಜರಾತ್ (72 ಲಕ್ಷ), ಪಶ್ಚಿಮ ಬಂಗಾಳ (58 ಲಕ್ಷ), ರಾಜಸ್ಥಾನ (43 ಲಕ್ಷ), ಮಧ್ಯಪ್ರದೇಶ (30 ಲಕ್ಷ), ಛತ್ತೀಸಗಢ (28 ಲಕ್ಷ) ಮತ್ತು ಕೇರಳ (21 ಲಕ್ಷ) ಇವೆ. ಸರಾಸರಿ ಹೆಸರು ಕೈಬಿಡುವಿಕೆಯು ಬಿಹಾರಕ್ಕೆ ಹೋಲಿಸಿದರೆ ಹೆಚ್ಚೇ ಇರಲಿದೆ.

ಈ ಹೊರಗಿಡುವಿಕೆಯಲ್ಲಿ ಸಹಜವಾದದ್ದು ಏನೂ ಇಲ್ಲ. ತಮಿಳುನಾಡನ್ನು ಹೊರತುಪಡಿಸಿದರೆ (ಅಲ್ಪ ಪ್ರಮಾಣದಲ್ಲಿ ಕೇರಳ) ಯಾವ ರಾಜ್ಯದಲ್ಲಿಯೂ ಅರ್ಹ ಜನಸಂಖ್ಯೆಗಿಂತ ಈಗಾಗಲೇ ಇರುವ ಮತದಾರರ ಪಟ್ಟಿ ದೊಡ್ಡದಾಗಿಲ್ಲ. ಅರ್ಹ ವಯಸ್ಕ ಜನಸಂಖ್ಯೆ ಮತ್ತು ಎಸ್ಐಆರ್ಪೂರ್ವದ ಮತದಾರರ ಪಟ್ಟಿಯಲ್ಲಿರುವ ಜನರ ಸಂಖ್ಯೆಯನ್ನು ಹೋಲಿಸಿ ಇದನ್ನು ದೃಢಪಡಿಸಿಕೊಳ್ಳಬಹುದು. ಎಲ್ಲ ರಾಜ್ಯಗಳಲ್ಲಿಯೂ ವಯಸ್ಕ ಜನಸಂಖ್ಯೆ ಮತ್ತು ಮತದಾರರ ಅನುಪಾತ ಇಳಿಕೆ ಆಗಲಿದೆ ಎಂಬುದನ್ನೂ ಅಂಕಿಅಂಶಗಳು ತೋರಿಸುತ್ತವೆ. ಸರಾಸರಿ ಇಳಿಕೆಯು ಶೇ 12ರಷ್ಟಿದೆ. ಬಿಹಾರದ ಕರಡು ಎಸ್ಐಆರ್ನಲ್ಲಿ ಈ ಪ್ರಮಾಣವು ಶೇ 8ರಷ್ಟಿತ್ತು. ಆಘಾತ ಉಂಟು ಮಾಡುವ ಅಂಶವೆಂದರೆ, ಉತ್ತರ ಪ್ರದೇಶದಲ್ಲಿ ಈ ಪ್ರಮಾಣವು ಶೇ 96ರಿಂದ ಶೇ 78ಕ್ಕೆ ಇಳಿದು ಒಟ್ಟು ಶೇ 18ರಷ್ಟು ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ಇದು ಸ್ವಲ್ಪಮಟ್ಟಿಗೆ ಸರಿಹೋಗಬಹುದು. ತಮಿಳುನಾಡು, ಗುಜರಾತ್ ಮತ್ತು ಛತ್ತೀಸಗಢದಲ್ಲಿ ಶೇ 13ರಿಂದ 14ರಷ್ಟು ಕುಸಿತ ಕೂಡ ಆಘಾತ ಉಂಟು ಮಾಡುವಷ್ಟು ಇದೆ.

ಈ ಸಂಖ್ಯೆ ಮುಂದಿನ ದಿನಗಳಲ್ಲಿ ಬದಲಾಗಬಹುದು. ಆದರೆ, ಗಣನೀಯವಾದ ಬದಲಾವಣೆಯ ಸಾಧ್ಯತೆ ಬಹಳ ಕ್ಷೀಣ. ಏಕೆಂದರೆ, ಇವುಗಳಲ್ಲಿ ಬಹುಪಾಲು ನಮೂದುಗಳನ್ನು ‘ಸಂಗ್ರಹಿಸಲಾಗದು’ ಎಂಬ ವರ್ಗಕ್ಕೆ ಸೇರಿಸಿ ಗೈರು, ಸ್ಥಳಾಂತರ, ನಿಧನ ಅಥವಾ ನಕಲಿ (ಒಂದಕ್ಕಿಂತ ಹೆಚ್ಚು ಕಡೆ ನಮೂದು) ಎಂಬ ಕಾರಣಗಳನ್ನು ಆಯೋಗವು ನೀಡಿದೆ.

ಬಹುತೇಕ ರಾಜ್ಯಗಳಲ್ಲಿ ವರ್ಗೀಕರಣದ ಅಧಿಕೃತ ಸಂಖ್ಯೆ ನಮಗೆ ಸಿಕ್ಕಿಲ್ಲ. ಆದರೆ, ಲಭ್ಯ ಇರುವ ಮಾಹಿತಿಯು ಸ್ಪಷ್ಟವಾದ ಪ್ರವೃತ್ತಿಯೊಂದನ್ನು ತೋರಿಸುತ್ತದೆ. ‘ನಿಧನ’ ಮತ್ತು ‘ಸ್ಥಳಾಂತರ’ ಎಂದು ಗುರುತಿಸಲಾದ ಪ್ರಮಾಣವು ಈ ಎಲ್ಲ ರಾಜ್ಯಗಳಲ್ಲಿಯೂ ಸರಿಸುಮಾರು ಸ್ಥಿರವಾಗಿದೆ. ಆದರೆ, ‘ಗೈರು’ ಮತ್ತು ‘ಸ್ಥಳಾಂತರ’ ಎಂದು ಗುರುತಿಸಲಾದವರ ಪ್ರಮಾಣವು ಛತ್ತೀಸಗಢ (ಶೇ 9), ಗುಜರಾತ್ (ಶೇ 10) ಮತ್ತು ಉತ್ತರ ಪ್ರದೇಶದಲ್ಲಿ (ಶೇ 13.7) ಆಘಾತಕರ ಎನ್ನುವಷ್ಟು ಅತಿಯಾಗಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ
(ಶೇ 1.6) ಅಸಹಜ ಎನ್ನುವಷ್ಟು ಕಡಿಮೆ ಇದೆ. ಉತ್ತರ ಪ್ರದೇಶದಂತಹ ಹೊರ ವಲಸೆ ರಾಜ್ಯದಲ್ಲಿ ‘ಗೈರು’ ಮತ್ತು ವಲಸಿಗರ ಪ್ರಮಾಣವು ಅಸಹಜವಾಗಿ ಅತಿಯಾಗಿದೆ ಮತ್ತು ದೊಡ್ಡ ಪ್ರಮಾಣದ ಒಳ–ವಲಸೆಯ ರಾಜ್ಯವಾದ ಗುಜರಾತ್ನಲ್ಲಿಯೂ ಈ ಪ್ರಮಾಣ ಅತಿಯಾಗಿಯೇ ಇದೆ. ಹೀಗೆ ಇದು ಯಾವ ತರ್ಕಕ್ಕೂ ನಿಲುಕದ ರೀತಿಯಲ್ಲಿದೆ. ಎಸ್ಐಆರ್ನಿಂದಾಗಿ ಹೊಸ ಸಮುದಾಯವೊಂದು ಇಲ್ಲಿ ಸೃಷ್ಟಿಯಾಗಬಹುದು– ಭಾರತದಲ್ಲಿ ಜನಿಸಿದ ನಿವಾಸಿಗಳು, ಆದರೆ, ಮೂಲ ಸ್ಥಳದಲ್ಲಾಗಲಿ ಕೆಲಸದ ಸ್ಥಳದಲ್ಲಾಗಲಿ ಮತದಾನದ ಹಕ್ಕು ಇಲ್ಲದವರು.

ಈಗ ನಡೆಯುತ್ತಿರುವ ಎಸ್ಐಆರ್ನಲ್ಲಿ ಹೆಸರುಗಳನ್ನು ತೆಗೆದುಹಾಕಲು ಇನ್ನೊಂದು ಅವಕಾಶವೂ ಇದೆ. ಅದು, ಹಿಂದಿನ ಪಟ್ಟಿಯಲ್ಲಿ ಇಲ್ಲದವರು ಎಂಬ ವರ್ಗ. ಈ ಜನರು ಗಣತಿ ನಮೂನೆಯನ್ನು ಸಲ್ಲಿಸಿದ್ದರೂ ತಾವು ಅಥವಾ ತಮ್ಮ ಸಂಬಂಧಿಕರ (ಈ ಪದವನ್ನು ಇನ್ನೂ ವ್ಯಾಖ್ಯಾನಿಸಿಲ್ಲ) ಹೆಸರು 2002 ಅಥವಾ 2003ರ ಮತದಾರರ ಪಟ್ಟಿಯಲ್ಲಿ ಇತ್ತು ಎಂಬ ಪುರಾವೆ ಇಲ್ಲದವರು. ಇಂಥವರ ಹೆಸರನ್ನು ಕರಡು ಪಟ್ಟಿಯಲ್ಲಿ ಸೇರ್ಪಡೆ ಮಾಡಿದರೂ ಅದು ತಾತ್ಕಾಲಿಕ ನಮೂದು ಮಾತ್ರ. ಅವರಿಗೆ ನೋಟಿಸ್ ನೀಡಿ, ಪೌರತ್ವದ ಪುರಾವೆ ಸಲ್ಲಿಸುವಂತೆ ಸೂಚಿಸಲಾಗುವುದು. ಪುರಾವೆ ಸಲ್ಲಿಸಲು ವಿಫಲರಾದರೆ, ಅಂತಿಮ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗುವುದು.

ಈಗ ನಮ್ಮಲ್ಲಿ ‘ಪುರಾವೆ ಇಲ್ಲದ’ ಇಂತಹ ಎಷ್ಟು ಜನರು ಇದ್ದಾರೆ? ಯಾವ ರಾಜ್ಯವೂ ಅಧಿಕೃತವಾಗಿ ಈ ಅಂಕಿಅಂಶವನ್ನು ಪ್ರಕಟಿಸಿಲ್ಲ. ಕೇರಳ ಮತ್ತು ಛತ್ತೀಸಗಢದಿಂದ ಅಧಿಕೃತವಲ್ಲದ ಅಂಕಿಅಂಶವೂ ಇಲ್ಲ. ಹಾಗಿದ್ದರೂ ಪ್ರಮಾಣದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಾರಿ ಏರಿಳಿತ ಇದೆ. ಸಲ್ಲಿಕೆಯಾದ ನಮೂನೆಗಳಿಗೆ ಹೋಲಿಸಿದರೆ ‘ಪುರಾವೆ ಇಲ್ಲದ’ ಜನರ ಸಂಖ್ಯೆಯು ಕಳವಳ ಮೂಡಿಸುವಷ್ಟಿದೆ– ಉತ್ತರ ಪ್ರದೇಶದಲ್ಲಿ ಶೇ 27.1 ಮತ್ತು ಗುಜರಾತ್ನಲ್ಲಿ ಶೇ 16 ಇದ್ದರೆ, ತಮಿಳುನಾಡು (ಶೇ 10) ಮತ್ತು ಪಶ್ಚಿಮ ಬಂಗಾಳ (ಶೇ 4), ರಾಜಸ್ಥಾನ (ಶೇ 3) ಮತ್ತು ಮಧ್ಯಪ್ರದೇಶದಲ್ಲಿ (ಶೇ 2.4) ಕಡಿಮೆ ಇದೆ. ಒಟ್ಟಿನಲ್ಲಿ 5.25 ಕೋಟಿ ಜನರು– ಅವರಲ್ಲಿ 3.39 ಕೋಟಿ ಜನರು ಉತ್ತರ ಪ್ರದೇಶದಲ್ಲಿಯೇ ಇದ್ದಾರೆ– ಮತದಾರರ ಪಟ್ಟಿಯಿಂದ ಹೆಸರು ರದ್ದಾಗುವ ಆತಂಕದಲ್ಲಿ ಇದ್ದಾರೆ.

ಗಣತಿ ನಮೂನೆ ಸಲ್ಲಿಸದ 6.3 ಕೋಟಿ ಜನರು ಮತ್ತು ಪುರಾವೆ ನೀಡದ 5.3 ಕೋಟಿ ಜನರು ಸೇರಿ ಒಟ್ಟು 11.6 ಕೋಟಿ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಎರಡು ವರ್ಗಕ್ಕೆ ಸೇರಿದ್ದಾರೆ. ಇದು ಆಯಾ ರಾಜ್ಯಗಳ ಒಟ್ಟು ಜನಸಂಖ್ಯೆಯ ಐದನೇ ಒಂದರಷ್ಟಾಗುತ್ತದೆ. ವಿಶೇಷವಾಗಿ, ಉತ್ತರ ಪ್ರದೇಶದಲ್ಲಿ ‘ಪುರಾವೆರಹಿತ’ ಮತದಾರರ ಸಂಖ್ಯೆಯಲ್ಲಿ ಗಣನೀಯ ಕುಸಿತ ಆಗಬೇಕು. ಅದೇ ರೀತಿಯಲ್ಲಿ, ಪಶ್ಚಿಮ ಬಂಗಾಳದಲ್ಲಿ ಈ ಪ್ರಮಾಣ ಸ್ವಲ್ಪ ಏರಿಕೆ ಆಗಬಹುದು. ನೋಟಿಸ್ ಪಡೆಯುವವರಲ್ಲಿ ಒಂದು ಸಣ್ಣ ಪ್ರಮಾಣದ ಜನರ ಹೆಸರನ್ನು ಮಾತ್ರ ಅಂತಿಮ ಪಟ್ಟಿಯಿಂದ ಅಳಿಸಲಾಗುವುದು ಎಂಬುದು ನಿಜ. ಈಗ ಪಟ್ಟಿ ಮಾಡಲಾದ ಜನರ ಅರ್ಧದಷ್ಟು ಜನರ ಮತದಾನದ ಅವಕಾಶ ರದ್ದುಪಡಿಸಿದರೂ ಇದು ಪ್ರಜಾಪ್ರಭುತ್ವದಲ್ಲಿಯೇ ಅತಿದೊಡ್ಡ ಪ್ರಮಾಣದ ಮತದಾನದ ಹಕ್ಕು ರದ್ದತಿ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.